ಬೆಂಗಳೂರು: ಸಂಸದೆ ಸುಮಲತಾ ಸುತ್ತ ಗೂಂಡಾಗಳು, ಫ್ರಾಡ್ ಗಳು ಇದ್ದಾರೆ. ಸುಮಲತಾ ಸುತ್ತ ಇರುವವರಿಂದ ಅಧಿಕಾರಿಗಳಿಗೆ ಧಮ್ಕಿ ಹಾಕಲಾಗುತ್ತಿದೆ. ಹಣಕ್ಕಾಗಿ ಪೀಡಿಸಲಾಗುತ್ತಿದೆ. ಸುಮಲತಾ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದು ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಆಗ್ರಹಿಸಿದ್ದಾರೆ.
ಸುಮಲತಾ ಅಟೆಂಡರ್ ಓರ್ವ ನಯವಂಚಕ. ಮೆಡಿಕಲ್ ಸೀಟ್ ಕೊಡಿಸುವುದಾಗಿ ಹೇಳಿ ಜನರಿಗೆ ಪಂಗನಾಮ ಹಾಕಿದ್ದಾನೆ. ಇನ್ನು ಸುಮಲತಾಗೆ ಆಪ್ತಕಾರ್ಯದರ್ಶಿ ಎಂಬ ಹುದ್ದೆಯೇ ಇಲ್ಲ ಆದರೂ ಶ್ರೀನಿವಾಸ್ ಭಟ್ ಎಂಬುವವನನ್ನು ಅನಧಿಕೃತವಾಗಿ ಪಿಎಸ್ ಮಾಡಿಕೊಂಡಿದ್ದಾರೆ. ಸುಮಲತಾ ಅವರ ಬಳಿ ಇದ್ದವರಿಂದ ಧಮ್ಕಿ ಹಾಕಲಾಗುತ್ತಿದ್ದು, ಅಧಿಕಾರಿಗಳು ಮಾನಸಿಕವಾಗಿ ಜರ್ಜರಿತರಾಗಿದ್ದಾರೆ. ಸುಮಲತಾ ವಿರುದ್ಧ ಕ್ರೊಮಿನಲ್ ಕೇಸ್ ದಾಖಲಿಸಿ ತನಿಖೆ ನಡೆಸಬೇಕು ಎಂದು ಕಿಡಿಕಾರಿದ್ದಾರೆ.
ನವ ವಧು-ವರರಿಗೆ ಹಾಸ್ಯನಟ ಕೊಟ್ಟ ಗಿಫ್ಟ್ ಏನು ಗೊತ್ತಾ….?
ಕೆಲ ದಿನಗಳಿಂದ ಸಂಸದೆ ಸುಮಲತಾ ಹಾಗೂ ಜೆಡಿಎಸ್ ಶಾಸಕ ನಡುವಿನ ವಾಕ್ಸಮರ ಕೊಂಚ ತಣ್ಣಗಾಗಿತ್ತು, ಇದೀಗ ನಿನ್ನೆ ನಡೆದ ದಿಶಾ ಸಭೆ ಬಳಿಕ ಮತ್ತೆ ಉಭಯ ನಾಯಕರ ನಡುವಿನ ಆರೋಪ-ಪ್ರತ್ಯಾರೋಪ, ವಾಗ್ದಾಳಿ ಆರಂಭವಾಗಿದೆ.