ಬೆಂಗಳೂರು: ನಾಯಕತ್ವ ಬದಲಾವಣೆ ಚರ್ಚೆ ವಿಚಾರ ಅಂತಿಮ ಘಟ್ಟಕ್ಕೆ ಬಂದು ನಿಂತಿದ್ದು, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ನೇತೃತ್ವದಲ್ಲಿ ರಾಜ್ಯ ಬಿಜೆಪಿ ಮಹತ್ವ ಕೋರ್ ಕಮಿಟಿ ಸಭೆಗೆ ಕ್ಷಣಗಣನೆ ಆರಂಭವಾಗಿದೆ.
ಕೋರ್ ಕಮಿಟಿ ಸಭೆಗೂ ಮುನ್ನ ಪ್ರತಿಕ್ರಿಯಿಸಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಪಕ್ಷ ಹಾಗೂ ರಾಜ್ಯದ ಹಿತದ ಬಗ್ಗೆ ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಲಾಗುವುದು. ಕೊರ್ ಕಮಿಟಿ ಇರುವುದೇ ಒಳಿತು, ಕೆಡುಕುಗಳ ಚರ್ಚೆಗೆ ಎಂದರು.
2nd PU ಫಲಿತಾಂಶದಲ್ಲಿ ಮತ್ತೆ ಬದಲಾವಣೆ; ಹಳೇ ಮಾದರಿ ಅನುಸರಿಸಲು ನಿರ್ಧಾರ
ರಾಜ್ಯ ಸಚಿವ ಸಂಪುಟ ಪುನಾರಚನೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಈ ಬಗ್ಗೆ ಪಕ್ಷ ಸಲಹೆ ನೀಡಬಹುದು ಅಷ್ಟೇ. ಆದರೆ ಅಂತಿಮ ನಿರ್ಧಾರವನ್ನು ಕೈಗೊಳ್ಳುವುದು ಮಾತ್ರ ಸಿಎಂ. ಈ ನಿಟ್ಟಿನಲ್ಲಿ ಅವರೇ ತೀರ್ಮಾನಿಸುತ್ತಾರೆ ಎಂದು ಹೇಳಿದರು.
ರೊನಾಲ್ಡೋ ‘ಕೋಕ್’ ಬಾಟಲಿ ಘಟನೆ ಬಳಿಕ ಈ ಜಾಹೀರಾತು ವೈರಲ್…!
ಇನ್ನು ನಮ್ಮ ಪಕ್ಷದ ಬೆಳವಣಿಗೆಗೆ ಮಠಾಧೀಶರು ಆಶಿರ್ವದಿಸಿದ್ದಾರೆ. ಎಲ್ಲಾ ಮಠಾಧೀಶರ ಬೆಂಬಲ ಸದಾಕಾಲ ಇರಲಿ. ನಮ್ಮ ಪಕ್ಷಕ್ಕೆ ಜಾತಿಯಿಲ್ಲ. ನಮ್ಮ ಪಕ್ಷಕ್ಕೆ ಇರುವುದು ಸಿದ್ಧಾಂತ ಮಾತ್ರ. ಹೀಗಾಗಿ ಕೋರ್ ಕಮಿಟಿ ಸಭೆಯಲ್ಲಿ ಎಲ್ಲಾ ವಿಚಾರಗಳ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.