ಮುಂಬೈ ಷೇರು ಪೇಟೆಯಲ್ಲಿ ಸೋಮವಾರದ ವಹಿವಾಟು ಆರಂಭವಾಗುತ್ತಿದ್ದಂತೆ ಅಲ್ಲೋಲ ಕಲ್ಲೋಲ ಶುರುವಾಗಿದೆ. ಸೆನ್ಸೆಕ್ಸ್ 500 ಪಾಯಿಂಟ್ ಕುಸಿತ ದಾಖಲಿಸಿದೆ. ನಿಫ್ಟಿ ಕೂಡ 18,200ಕ್ಕಿಂತಲೂ ಕೆಳಕ್ಕಿಳಿದಿದೆ. ಆಟೊಮೊಬೈಲ್, ಐಟಿ, ವಿದ್ಯುತ್, ತೈಲ ಮತ್ತು ಗ್ಯಾಸ್ ಕ್ಷೇತ್ರಗಳು ಹಿನ್ನಡೆ ಅನುಭವಿಸಿವೆ. ಅಮೆರಿಕದ ಕಠಿಣ ಮೊನಿಟರಿ ಪಾಲಿಸಿ, ಚೀನಾದಲ್ಲಿ ಹೆಚ್ಚುತ್ತಿರುವ ಕೋವಿಡ್ ಸೋಂಕಿತ ಪ್ರಕರಣ ಕೂಡ ಈ ಕುಸಿತಕ್ಕೆ ಕಾರಣವೆಂದು ವಿಶ್ಲೇಷಿಸಲಾಗ್ತಿದೆ.
ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಕುಸಿತ ಕೂಡ ಷೇರು ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ. ಇನ್ಫೋಸಿಸ್, ವಿಪ್ರೋ, ಮೈಂಡ್ ಟ್ರೀ, ಪರ್ಸಿಸ್ಟೆಂಟ್ ಸಿಸ್ಟಮ್ಸ್ ಲಿಮಿಟೆಡ್ ಸೇರಿದಂತೆ ಅನೇಕ ಕಂಪನಿಗಳ ಷೇರು ಇಳಿಮುಖವಾಗಿದ್ದು, ವಹಿವಾಟು ಆರಂಭದಲ್ಲಿ ನಷ್ಟ ಅನುಭವಿಸಿವೆ. ಇಂಜಿನಿಯರ್ಸ್ ಇಂಡಿಯಾದ ಷೇರುಗಳ ಮೌಲ್ಯ1 ರೂಪಾಯಿ 40 ಪೈಸೆಯಷ್ಟು ಕುಸಿದಿದ್ದು, ಬಿಎಸ್‌ಇಯಲ್ಲಿ ಶೇ.1.78 ರಷ್ಟು ಕಡಿಮೆಯಾಗಿದೆ.
ಶುಕ್ರವಾರ ವಹಿವಾಟು ಅಂತ್ಯದ ವೇಳೆಗೆ ನಿಫ್ಟಿ 18,350ರ ಗಡಿ ದಾಟಿತ್ತು. ಇಂದು ಮಾರುಕಟ್ಟೆ ವಹಿವಾಟು ಆರಂಭವಾಗುತ್ತಿದ್ದಂತೆಯೇ ಸೆನ್ಸೆಕ್ಸ್ 300 ಪಾಯಿಂಟ್ ಕೆಳಕ್ಕಿಳಿದ್ರೆ, ನಿಫ್ಟಿ ಕೂಡ 18,250ಕ್ಕೆ ಬಂದು ತಲುಪಿತ್ತು. ಷೇರು ಮಾರುಕಟ್ಟೆ ಕುಸಿತದ ನಡುವೆಯೂ ಹಲವು ಬ್ಯಾಂಕ್‌ಗಳು ಲಾಭದತ್ತ ಮುಖಮಾಡಿವೆ.