ಈ ದಿನವು ಷೇರು ಮಾರುಕಟ್ಟೆಯ ಪಾಲಿಗೆ ಬ್ಲ್ಯಾಕ್ ಮಂಡೇ ಎಂದು ಸಾಬೀತಾಗಿದೆ. ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಹಾಗೂ ನಿಫ್ಟಿ ಭಾರೀ ಕುಸಿತವನ್ನು ಕಂಡಿದೆ. ಬಾಂಬೆ ಸ್ಟಾಕ್ ಎಕ್ಸ್ಚೇಂಜ್ನ ಸೆನ್ಸೆಕ್ಸ್ 1023. 63 ಪಾಯಿಂಟ್ನಷ್ಟು ಅಥವಾ 1.75 ಪ್ರತಿಶತ ಕುಸಿತ ಕಂಡು 57,621.19ಕ್ಕೆ ಕೊನೆಗೊಂಡಿದೆ. ಇದೇ ರೀತಿ ನಿಫ್ಟಿಯು 302.70 ಪಾಯಿಂಟ್ ಅಂದರೆ 1.73 ಪ್ರತಿಶತದಷ್ಟು ಕುಸಿತದೊಂದಿದೆ 17,213.60ಕ್ಕೆ ಕೊನೆಗೊಂಡಿದೆ.
30 ಸೆನ್ಸೆಕ್ಸ್ ಷೇರುಗಳ ಪೈಕಿ ಕೇವಲ 5 ಷೇರುಗಳು ಮಾತ್ರ ಲಾಭದಲ್ಲಿ ಕೊನೆಗೊಂಡಿವೆ. 25 ಷೇರುಗಳು ಕುಸಿತದೊಂದಿಗೆ ಕೊನೆಗೊಂಡಿವೆ. ಹೆಚ್ಡಿಎಫ್ಸಿ ಬ್ಯಾಂಕುಗಳ ಷೇರು ಇಂದು ಬಿಎಸ್ಇನಲ್ಲಿ ಶೇಕಡಾ 3.65 ಪ್ರತಿಶತದಷ್ಟು ಕುಸಿತ ಕಂಡಿದೆ. ಇದಾದ ಬಳಿಕ ಬಜಾಜ್ ಫೈನಾನ್ಸ್ನ ಷೇರುಗಳು ಶೇಕಡಾ 3 ಪ್ರತಿಶತದಷ್ಟು ಕುಸಿತ ಕಂಡಿದೆ. ಇನ್ನೊಂದೆಡೆ ನಿಫ್ಟಿ ನೆಕ್ಸಟ್ 50, ನಿಫ್ಟಿ ಮಿಡ್ಕ್ಯಾಪ್, ನಿಫ್ಟಿ ಬ್ಯಾಂಕ್ ಹಾಗೂ ನಿಫ್ಟಿ ಹಣಕಾಸು ಸೂಚ್ಯಂಕಗಳು ಸಹ ಕುಸಿದಿವೆ.
ಕಳೆದ ಮೂರು ವ್ಯಾವಹಾರಿಕ ದಿನಗಳಲ್ಲಿ ಉಂಟಾದ ಕುಸಿತದಿಂದಾಗಿ ಹೂಡಿಕೆದಾರರು ಸುಮಾರು 6.7 ಲಕ್ಷ ಕೋಟಿ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ. ಬಿಎಸ್ಇ ಲಿಸ್ಟ್ ಮಾಡಿರುವ ಎಲ್ಲಾ ಷೇರುಗಳ ಮಾರುಕಟ್ಟೆ ಮೌಲ್ಯವು ಫೆಬ್ರವರಿ 2ರಂದು 270 ಕೋಟಿ ರೂಪಾಯಿಗಳಿಂದ ಇಂದು 264 ಕೋಟಿ ರೂಪಾಯಿಗಳಿಗೆ ಕುಸಿತ ಕಂಡಿದೆ. ಕೇವಲ ಇವತ್ತಿನ ಬಗ್ಗೆ ಮಾತ್ರ ಹೇಳುವುದಾದರೆ ಹೂಡಿಕೆದಾರರ 3 ಲಕ್ಷ ಕೋಟಿ ರೂಪಾಯಿ ಇಂದು ನಷ್ಟವಾಗಿದೆ.