ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ಶ್ರೀಲಂಕಾದಲ್ಲಿ ಸಾರ್ವಜನಿಕರ ಆಕ್ರೋಶದ ಕಟ್ಟೆಯೊಡೆದಿದೆ. ಸಿಕ್ಕ ಸಿಕ್ಕ ವಾಹನಗಳಲ್ಲಿ ಕೊಲಂಬೋಗೆ ಬಂದಿರುವ ಜನ, ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸೆಯವರ ಅಧಿಕೃತ ನಿವಾಸವನ್ನು ವಶಪಡಿಸಿಕೊಂಡಿದ್ದಾರೆ.
ಸಾರ್ವಜನಿಕರ ದಾಳಿಯ ಸುಳಿವು ಸಿಗುತ್ತಿದ್ದಂತೆಯೇ ಅಜ್ಞಾತ ಸ್ಥಳಕ್ಕೆ ಕುಟುಂಬ ಸಮೇತ ಪರಾರಿಯಾಗಿದ್ದ ಅಧ್ಯಕ್ಷ ಗೊಟಬಯ ರಾಜಪಕ್ಸೆ ಅಲ್ಲಿಂದಲೇ ಕೆಲವೊಂದು ಆದೇಶಗಳನ್ನು ನೀಡಿದ್ದರು. ಆದರೆ ಅಧ್ಯಕ್ಷರ ರಾಜೀನಾಮೆಗೆ ಒತ್ತಡ ಹೆಚ್ಚುತ್ತಿದ್ದಂತೆಯೇ ದೇಶದಿಂದ ಪರಾರಿಯಾಗಲು ಮುಂದಾಗಿದ್ದರು.
ಇದೀಗ ಮೂಲಗಳ ಮಾಹಿತಿಯಂತೆ ಮಿಲಿಟರಿ ವಿಮಾನದಲ್ಲಿ ರಾಜಪಕ್ಸೆ ಕುಟುಂಬ ಸಮೇತ ಮಾಲ್ಡೀವ್ಸ್ ಗೆ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ. ದೇಶದಲ್ಲಿದ್ದರೆ ರಾಜೀನಾಮೆ ಬಳಿಕ ಬಂಧನಕ್ಕೊಳಗಾಗಬಹುದೆಂಬ ಭೀತಿಯೆನ್ನೆದುರಿಸುತ್ತಿದ್ದ ಗೊಟಬಯ ರಾಜಪಕ್ಸೆ ಈಗ ವಿದೇಶದಿಂದಲೇ ತಮ್ಮ ರಾಜೀನಾಮೆ ಸಲ್ಲಿಸಬಹುದು ಎಂದು ಹೇಳಲಾಗಿದೆ.