ವೀಕ್ಷಕರಿಗೆ ಖ್ಯಾತ ಧಾರಾವಾಹಿ ನಿರ್ದೇಶಕ ಟಿ.ಎನ್.ಸೀತಾರಾಮ್ ಸಿಹಿ ಸುದ್ದಿ ಮೇಲೆ ಸಿಹಿ ಸುದ್ದಿ ನೀಡುತ್ತಿದ್ದಾರೆ. ಮಾಯಾಮೃಗ ಧಾರಾವಾಹಿಯ ಮುಂದಿನ ಭಾಗದ ಪ್ರಸಾರದ ಬಗ್ಗೆ ಮಾಹಿತಿ ನೀಡಿದ್ದ ಟಿ.ಎನ್.ಸೀತಾರಾಮ್ ಇದೀಗ ‘ಮಗಳು ಜಾನಕಿ’ ಕಥೆಯ ಶೂಟಿಂಗ್ ಕೂಡ ನಡೆಯುತ್ತಿರುವುದಾಗಿ ತಿಳಿಸಿದ್ದಾರೆ.
ಕನ್ನಡ ಕಿರುತೆರೆಯಲ್ಲಿ ಧಾರಾವಾಹಿಗಳಿಗೆ ನಿಜ ಜೀವನದ ಕಥಾ ಹಂದರದ ಟಚ್ ನೀಡುವ ಮೂಲಕ ಕಿರುತೆರೆಯಲ್ಲಿ ಹೊಸ ಸಂಚಲನ ಮೂಡಿಸಿದ್ದ ಟಿ.ಎನ್. ಸೀತಾರಾಮನ್ ಅವರ ಪ್ರಮುಖ ಧಾರಾವಾಹಿಗಳಲ್ಲಿ ಮಗಳು ಜಾನಕಿ ಕೂಡ ಒಂದು.
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಈ ಧಾರಾವಾಹಿ ಕೋವಿಡ್ ಹಾಗೂ ಲಾಕ್ಡೌನ್ ಕಾರಣಗಳಿಂದಾಗಿ ಪ್ರಸಾರ ಸ್ಥಗಿತಗೊಂಡಿತ್ತು. ವೀಕ್ಷಕರ ಮನಗೆದ್ದಿದ್ದ ಮಗಳು ಜಾನಕಿಗಾಗಿ ಮತ್ತೆ ಮತ್ತೆ ಮನವಿಗಳು ಬರುತ್ತಿದ್ದವು. ಇದೀಗ ವೀಕ್ಷಕರ ಮನವಿಗೆ ಸಮ್ಮತಿಸಿರುವ ಸೀತಾರಾಮ್, ಮಗಳು ಜಾನಕಿ ಧಾರವಾಹಿ ಮುಂದುವರೆಸಲಿದ್ದಾರೆ.
ಈ ಕುರಿತು ಫೇಸ್ ಬುಕ್ ನಲ್ಲಿ ಸ್ಪಷ್ಟ ಮಾಹಿತಿ ನೀಡಿರುವ ಟಿ.ಎನ್.ಸೀತಾರಾಮ್, ಜಾನಕಿ ಮುಂದಿನ ಕಥೆಯ ಧಾರಾವಾಹಿ ಆಗಸ್ಟ್ ನಲ್ಲಿ ಶೂಟಿಂಗ್ ಆರಂಭವಾಗಲಿದೆ. ನಿಮ್ಮ ಹಾರೈಕೆಯೇ ನಮ್ಮ ಶಕ್ತಿ ಎಂದು ಹೇಳುವ ಮೂಲಕ ಶೀಘ್ರದಲ್ಲಿಯೇ ವೀಕ್ಷಕರ ಮನೆಗಳಿಗೆ ‘ಮಗಳು ಜಾನಕಿ’ ಬರಲಿದ್ದಾಳೆ ಎಂದು ತಿಳಿಸಿದ್ದಾರೆ.