ಮುಂಬೈ: ಒಂದೆಡೆ ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟಿನಿಂದಾಗಿ ಸಿಎಂ ಉದ್ಧವ್ ಠಾಕ್ರೆ ಸರ್ಕಾರ ಪತನದ ಅಂಚಿನಲ್ಲಿದೆ. ಇನ್ನೊಂದೆಡೆ ಶಿವಸೇನೆ ನಾಯಕರಿಗೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಸಮನ್ಸ್ ನೀಡಿದ್ದಾರೆ.
ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಪರ ನಿಂತಿರುವ ಶಿವಸೆನೆ ನಾಯಕ ಸಂಜಯ್ ರಾವತ್ ಗೆ ಇಡಿ ಸಮನ್ಸ್ ಜಾರಿ ಮಾಡಿದ್ದು, ನಾಳೆಯೇ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಭೂ ಅವ್ಯವಹಾರ ಹಗರಣದಲ್ಲಿ ಸಂಜಯ್ ರಾವತ್ ಭಾಗಿಯಾಗಿರುವ ಆರೋಪ ಹಿನ್ನೆಲೆಯಲ್ಲಿ ರಾವತ್ ಗೆ ಇಡಿ ಸಮನ್ಸ್ ನೀಡಿದೆ.
ಸಂಜಯ್ ರಾವತ್ ಗೆ ಇಡಿ ಸಮನ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಕಿಡಿ ಕಾರಿರುವ ತೃಣಮೂಲ ಕಾಂಗ್ರೆಸ್, ಇದು ಕೇಂದ್ರ ಬಿಜೆಪಿ ಸರ್ಕಾರದ ದುರುದ್ದೇಶ. ಬಿಜೆಪಿ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದು, ವಿಪಕ್ಷ ನಾಯಕರ ವಿರುದ್ಧ ಮಾತ್ರ ಇಡಿ ಸಮನ್ಸ್ ಜಾರಿ ಮಾಡುವಂತೆ, ವಿಚಾರಣೆಗೊಳಪಡಿಸುವಂತೆ ಮಾಡುತ್ತಿದೆ ಎಂದು ಅಕ್ರೋಶ ವ್ಯಕ್ತಪಡಿಸಿದೆ.