ಶಿವಮೊಗ್ಗದ ಖ್ಯಾತ ವೈದ್ಯೆ ಡಾ. ಜಯಶ್ರೀ ಅವರ ಸೊಸೆ ನವ್ಯಶ್ರೀ ಸಾವಿಗೆ ಶರಣಾಗಿದ್ದಾರೆ. ಕೇವಲ ಐದು ತಿಂಗಳ ಹಿಂದಷ್ಟೇ ಜಯಶ್ರೀ ಅವರ ಪುತ್ರ ಆಕಾಶ್ ಜೊತೆ ನವ್ಯಶ್ರೀ ವಿವಾಹವಾಗಿದ್ದರು.
ಅಶ್ವಥ್ ನಗರದಲ್ಲಿ ವಾಸವಾಗಿದ್ದ ನವ್ಯಶ್ರೀ ನಿನ್ನೆ ತುಳಸಿ ಪೂಜೆಗಾಗಿ ನೆರೆಹೊರೆಯವರ ಮನೆಗಳಿಗೆ ತೆರಳಿದ್ದರು ಎನ್ನಲಾಗಿದೆ. ಅರಿಶಿಣ ಕುಂಕುಮ ಪಡೆದ ಬಂದ ಅವರು ಲವಲವಿಕೆಯಿಂದಲೇ ಇದ್ದು ದಿಢೀರ್ ಸಾವು ಕಂಡಿರುವುದು ಅನುಮಾನಕ್ಕೆ ಕಾರಣವಾಗಿದೆ.
ನವ್ಯಶ್ರೀ ಸಾವಿನ ಕುರಿತು ಅವರ ಕುಟುಂಬ ಸದಸ್ಯರು ಸಂದೇಹ ವ್ಯಕ್ತಪಡಿಸುತ್ತಿದ್ದು, ಪ್ರಕರಣ ದಾಖಲಿಸಿಕೊಂಡಿರುವ ವಿನೋಬಾ ನಗರ ಠಾಣೆ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.