144 ಸೆಕ್ಷನ್ ಜಾರಿಯಲ್ಲಿರುವ ಕಾರಣ ಜನರು ಗುಂಪುಗೂಡುವುದನ್ನು ನಿರ್ಬಂಧಿಸಲಾಗಿದೆ. ಅಲ್ಲದೆ ಮುಂಜಾಗ್ರತಾ ಕ್ರಮವಾಗಿ ಅಂಗಡಿ ಮುಂಗಟ್ಟುಗಳನ್ನು ಸಹ ಬಂದ್ ಮಾಡಿಸಲಾಗಿದ್ದು, ಹೀಗಾಗಿ ಇಡೀ ಶಿವಮೊಗ್ಗ ನಗರ ಬಿಕೋ ಎನ್ನುತ್ತಿದೆ.
ಕೋವಿಡ್ ಕಾರಣಕ್ಕೆ ತಿಂಗಳಾನುಗಟ್ಟಲೆ ವ್ಯಾಪಾರವಿಲ್ಲದೆ ಕಂಗೆಟ್ಟಿದ್ದ ಜನ ಈಗ ಕೊರೋನಾ ಕಡಿಮೆಯಾಗಿರುವುದರಿಂದ ಮತ್ತೆ ಸಹಜ ಸ್ಥಿತಿಗೆ ವ್ಯಾಪಾರ ವಹಿವಾಟು ಮರಳುತ್ತಿದ್ದರ ಮಧ್ಯೆ ಆಗಸ್ಟ್ 15 ರಂದು ನಡೆದ ಘಟನೆಯಿಂದ ಮನೆಯಲ್ಲೇ ಕೂರುವಂತಾಗಿದೆ.
ಅಲ್ಲದೆ, ನಿರಂತರವಾಗಿ ಸುರಿದ ಮಳೆಯ ಕಾರಣಕ್ಕೆ ವ್ಯಾಪಾರವೂ ಸಹ ಕುಂಠಿತಗೊಂಡಿದ್ದು ಇದರ ಮಧ್ಯ ಪದೇಪದೇ ನಡೆಯುತ್ತಿರುವ ಇಂತಹ ಘಟನೆಗಳಿಂದ ಸಾರ್ವಜನಿಕರ ಬದುಕು ದುಸ್ತರವಾಗಿದೆ.
ಇಂದು ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಮದ್ಯದಂಗಡಿಗಳನ್ನು ಬಂದ್ ಮಾಡಿಸಲಾಗಿದ್ದು, ಹೀಗಾಗಿ ಮದ್ಯಪ್ರಿಯರು, ಆಯನೂರು ಸೇರಿದಂತೆ ಅಕ್ಕಪಕ್ಕದ ಊರುಗಳಿಗೆ ತೆರಳಿ, ಮದ್ಯ ಖರೀದಿಸುತ್ತಿದ್ದಾರೆ.