alex Certify BIG NEWS: ಶಿಕ್ಷಕರ ನೇಮಕಾತಿ ಹಗರಣ; ಬಾಗಲಕೋಟೆ ಡಿಡಿಪಿಐ ವಶಕ್ಕೆ ಪಡೆದ ಸಿಐಡಿ; ತೀವ್ರಗೊಂಡ ವಿಚಾರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಶಿಕ್ಷಕರ ನೇಮಕಾತಿ ಹಗರಣ; ಬಾಗಲಕೋಟೆ ಡಿಡಿಪಿಐ ವಶಕ್ಕೆ ಪಡೆದ ಸಿಐಡಿ; ತೀವ್ರಗೊಂಡ ವಿಚಾರಣೆ

ಬಾಗಲಕೋಟೆ: ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಬಾಗಲಕೋಟೆ ಡಿಡಿಪಿಐ ಶ್ರೀಶೈಲ್ ಅವರನ್ನು ವಶಕ್ಕೆ ಪಡೆದಿರುವ ಸಿಐಡಿ ವಿಚಾರಣೆ ತೀವ್ರಗೊಳಿಸಿದೆ.

ಕಳೆದ ಎರಡು ದಿನಗಳಿಂದ ಸಿಐಡಿ ವಿಚಾರಣೆ ನಡೆಸಿದ್ದು, ಶಿಕ್ಷಕರ ನೇಮಕಾತಿ ಅಕ್ರಮದಲ್ಲಿ ಶ್ರೀಶೈಲ್ ಭಾಗಿಯಾಗಿರುವ ಆರೋಪ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ.

ಶಿಕ್ಷಕರ ಅಕ್ರಮ ನೇಮಕಾತಿ ವಿಚಾರವಾಗಿ 2022ರಲ್ಲಿ ಶ್ರೀಶೈಲ್ ಬಿರಾದಾರ್ ಸೇರಿದಂತೆ ಐವರ ವಿರುದ್ಧ ವಿಧಾನಸೌಧ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧೀನ ಕಾರ್ಯದರ್ಶಿ ಮಲ್ಲಿಕಾರ್ಜುನ ರಾಮಚಂದ್ರಪ್ಪ ದೂರು ದಾಖಲಿಸಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...