ಬೆಂಗಳೂರು: ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಶಾಸಕರಿಂದ ಬಿರುಸಿನ ಮತದಾನ ಆರಂಭವಾಗಿದ್ದು, ಈ ನಡುವೆ ಜೆಡಿಎಸ್ ಶಾಸಕ ಹೆಚ್.ಡಿ.ರೇವಣ್ಣ ಅವರ ಮತ ಅಸಿಂಧುಗೊಳಿಸುವಂತೆ ಬಿಜೆಪಿ ಶಾಸಕರು ಒತ್ತಾಯಿಸಿದ್ದಾರೆ.
ಹೆಚ್.ಡಿ.ರೇವಣ್ಣ ಮತದಾನ ಮಾಡುವಾಗ ಡಿ.ಕೆ.ಶಿವಕುಮಾರ್ ಅವರಿಗೆ ಬ್ಯಾಲೆಟ್ ಪೇಪರ್ ತೋರಿಸಿ ಮತದಾನ ಮಾಡಿದ್ದಾರೆ. ಹೀಗಾಗಿ ಅವರ ಮತವನ್ನು ಅಸಿಂಧುಗೊಳಿಸಿ ಎಂದು ಚುನಾವಣಾಧಿಕಾರಿಗೆ ಬಿಜೆಪಿ ನಾಯಕರು ದೂರು ನೀಡಿದ್ದಾರೆ.
ಬಿಜೆಪಿ ಆರೋಪ ತಳ್ಳಿಹಾಕಿರುವ ರೇವಣ್ಣ, ನಾನು ಬ್ಯಾಲೆಟ್ ಪೇಪರ್ ನ್ನು ಡಿ.ಕೆ.ಶಿವಕುಮಾರ್ ಅವರಿಗೆ ಯಾಕೆ ತೋರಿಸಲಿ? ಬಿಜೆಪಿ ಆರೋಪದಲ್ಲಿ ಹುರುಳಿಲ್ಲ. ಹಾಗೆ ಮಾಡಿದ್ದರೆ ಸ್ಥಳದಲ್ಲೇ ಬಿಜೆಪಿಯವರು ಅಬ್ಜಕ್ಷನ್ ಮಾಡಬೇಕಿತ್ತು. ಒಂದು ವೇಳೆ ನಾನು ಬ್ಯಾಲೆಟ್ ಪೇಪರ್ ಡಿಕೆಶಿಗೆ ತೋರಿಸಿದ ಬಗ್ಗೆ ದೃಶ್ಯವಿದ್ದರೆ ಬಿಡುಗಡೆ ಮಾಡಲಿ. ನಾನು ನಮ್ಮ ಪಕ್ಷದ ಸೂಚಕರಿಗೆ ಮತ ತೋರಿಸಿದೆ ಅಷ್ಟೇ ಎಂದಿದ್ದಾರೆ.
ಕಾಂಗ್ರೆಸ್ ಜತೆ ಸೇರಿಕೊಂಡು ಬಿಜೆಪಿ ಆರೋಪ ಮಾಡುತ್ತಿದೆ. ಕೋಮುವಾದಿ ಪಕ್ಷಗಳಿಂದ ವೃಥಾ ನಮ್ಮ ವಿರುದ್ಧ ಆರೋಪ ಮಾಡಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.