ಕಲಬುರ್ಗಿ: ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ಪೋಸ್ಟರ್ ವಾರ್ ಆರಂಭಿಸಿದೆ. ಕಲಬುರ್ಗಿಯ ಹಲವೆಡೆಗಳಲ್ಲಿ ಶಾಸಕರು ಕಾಣೆಯಾಗಿದ್ದಾಗಿ ಪೋಸ್ಟರ್ ಅಂಟಿಸಲಾಗಿದೆ.
ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ಕ್ಷೇತ್ರದ ಹಲವೆಡೆಗಳಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ ಕಾಣೆಯಾಗಿದ್ದಾರೆ ಎಂದು ಭಿತ್ತಿ ಪತ್ರಗಳನ್ನು ಬಿಜೆಪಿ ಕಾರ್ಯಕರ್ತರು ಅಂಟಿಸಿದ್ದಾರೆ.
ಪ್ರಿಯಾಂಕ್ ಖರ್ಗೆ ಭಾವಚಿತ್ರ ಸಮೇತ ಭಿತ್ತಿಪತ್ರ ಅಂಟಿಸಲಾಗಿದ್ದು, ಗೋಡೆಗಳ ಮೇಲೆ ವಿವಿಧೆಡೆ ಭಿತ್ತಿ ಪತ್ರ ರಾರಾಜಿಸುತ್ತಿದೆ.