ಬೆಂಗಳೂರು: ಇತ್ತೀಚೆಗೆ ಶಾಸಕ ಜಮೀರ್ ಅಹ್ಮದ್ ಮನೆ ಮೇಲೆ ದಾಳಿ ನಡೆಸಿದ್ದ ಇಡಿ (ಜಾರಿ ನಿರ್ದೇಶನಾಲಯ) ಅಧಿಕಾರಿಗಳು ಇದೀಗ ಮತ್ತೊಂದು ಶಾಕ್ ನೀಡಿದ್ದು, ದಿಢೀರ್ ನೋಟೀಸ್ ಜಾರಿ ಮಾಡಿದ್ದಾರೆ.
10 ದಿನಗಳ ಒಳಗಾಗಿ ದಾಖಲೆಗಳನ್ನು ಸಲ್ಲಿಸಿ, ಸ್ಪಷ್ಟನೆ ನೀಡುವಂತೆ ಇಡಿ ಅಧಿಕಾರಿಗಳು ನೋಟೀಸ್ ಜಾರಿ ಮಾಡಿದ್ದಾರೆ. ಏಕಾಏಕಿ ನೋಟೀಸ್ ಜಾರಿಯಿಂದ ಜಮೀರ್ ಅಹ್ಮದ್ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ ಎನ್ನಲಾಗಿದೆ.
ಸಿಸಿ ಕ್ಯಾಮರಾದಲ್ಲಿ ಸೆರೆಯಾಯ್ತು ಯುವತಿಯ ಘೋರ ಕೃತ್ಯ
ಆಗಸ್ಟ್ 5ರಂದು ಜಮೀರ್ ಅಹ್ಮದ್ ಗೆ ಸಂಬಂಧಿಸಿದ 15 ಕಡೆ ಇಡಿ ಅಧಿಕಾರಿಗಳು ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದರು. ಈ ವೇಳೆ ಕೆಲ ದಾಖಲೆಗಳಿಲ್ಲದ ವಸ್ತು, ಆಸ್ತಿಗಳು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ 10 ದಿನಗಳ ಒಳಗಾಗಿ ದಾಖಲೆಗಳನ್ನು ಸಲ್ಲಿಸಲು ಸೂಚಿಸಲಾಗಿದೆ.