ತುಮಕೂರು: ಕಾಂಗ್ರೆಸ್ ನಲ್ಲಿ ಕೂಡ ಸಾಕಷ್ಟು ತಾಲಿಬಾನಿಗಳಿದ್ದಾರೆ. ಶಾಸಕ ಜಮೀರ್ ಅಹ್ಮದ್ ಕೂಡ ಒಂಥರಾ ತಾಲಿಬಾನಿಯೇ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸೊಗಡು ಶಿವಣ್ಣ, ತುಮಕೂರಿನಲ್ಲಿ ತಾಲಿಬಾನಿಗಳಿದ್ದಾರೆ. 1994ರಲ್ಲಿ ಒಬ್ಬ ಭಯೋತ್ಪಾದಕನಿದ್ದ. ಆತನನ್ನು 15 ವರ್ಷಗಳ ನಂತರ ಬಂಧಿಸಲಾಗಿತ್ತು. ಈಗ ಪೆರೋಲ್ ಮೇಲೆ ಬಿಡುಗಡೆಯಾಗಿದ್ದಾನೆ. ತುಮಕೂರಿನಲ್ಲಿ ನೂರೆಂಟು ಜನ ತಾಲಿಬಾನಿಗಳಿದ್ದಾರೆ. ಎಸ್ ಎಫ್ ಐ, ಪಿಎಫ್ ಐ ಸಂಘಟನೆಗಳೆಲ್ಲ ತಾಲಿಬಾನಿಗಳೇ. ಶಾಸಕ ಜಮೀರ್ ಕೂಡ ಒಂದು ರೀತಿ ತಾಲಿಬಾನಿ. ಅಖಂಡ ಶ್ರೀನಿವಾಸ್ ಮನೆಗೆ ಬೆಂಕಿ ಪ್ರಕರಣ ಹೇಗಾಯ್ತು? ಪೊಲೀಸ್ ಠಾಣೆಗೆ ನುಗ್ಗಿ ಧ್ವಂಸ ಮಾಡುತ್ತಾರೆ ಎಂದರೆ ಏನರ್ಥ ಎಂದು ಪ್ರಶ್ನಿಸಿದ್ದಾರೆ.
ಶಾಪಿಂಗ್ ಮಾಡುವ ಜನಸಾಮಾನ್ಯರಿಗೆ ಮಹತ್ವದ ಸುದ್ದಿ
ಜಮೀರ್ ಹಾಗೂ ಅಸಾದುದ್ದೀನ್ ನಂತವರನ್ನು ಬಂಧಿಸಬೇಕು. ಇವರ ವಿರುದ್ಧ ಮೊದಲು ಕ್ರಮ ಕೈಗೊಳ್ಳಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.