ಬೆಳಗಾವಿ: ರಾತ್ರಿ ರಾಜಕಾರಣ ಗೊತ್ತಿದ್ದರಿಂದಲೇ ಲಕ್ಷ್ಮಿ ಹೆಬ್ಬಾಳ್ಕರ್ ಶಾಸಕಿಯಾಗಿದ್ದು, ಎಂದು ಅವಹೇಳನಕಾರಿ ಹೇಳಿಕೆ ನೀಡುವ ಮೂಲಕ ವಿವಾದಕ್ಕೀಡಾಗಿದ್ದ ಬಿಜೆಪಿ ಮುಖಂಡ ಸಂಜಯ್ ಪಾಟೀಲ್, ಇದೀಗ ಮತ್ತೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಕಿಡಿಕಾರಿದ್ದು, ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಮರಾಠಿ ಭಾಷೆ ವಿರುದ್ಧ ಮಾತನಾಡಿ, ಮರಾಠಿ ಸಮುದಾಯಕ್ಕೆ ಸಂಜಯ್ ಪಾಟೀಲ್ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ಶಿವಸೇನೆ ಕಾರ್ಯಕರ್ತರು ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿದ್ದರು.
ಬಡವರು, ಮಧ್ಯಮ ವರ್ಗದವರಿಗೆ ಸರ್ಕಾರದಿಂದ ಗುಡ್ ನ್ಯೂಸ್: ಮುದ್ರಾಂಕ ಶುಲ್ಕ ಇಳಿಕೆ
ಇದರ ಬೆನ್ನಲ್ಲೇ ಇದೀಗ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ ಸಂಜಯ್ ಪಾಟೀಲ್, ನಾನು ಮರಾಠಿ ವಿರುದ್ಧ ಮತನಾಡಿಲ್ಲ. ನಾನು ಕೊಲ್ಲಾಪುರದಲ್ಲಿ ಹುಟ್ಟಿದವ. ಜನ್ಮದಿಂದಲೇ ಮರಾಠಿ ಭಾಷೆ ನನ್ನದು. ಮರಾಠಿ ನನ್ನ ಮಾತೃಭಾಷೆ. ಹೀಗಿರುವಾಗ ಮರಾಠಿಗೆ ಅವಮಾನ ಮಾಡಲು ಸಾಧ್ಯವೇ? ಇದರ ಹಿಂದೆ ಲಕ್ಷಿ ಹೆಬ್ಬಾಳ್ಕರ್ ಷಡ್ಯಂತ್ರವಿದೆ ಎಂದು ಗುಡುಗಿದ್ದಾರೆ.
ದೇಶದ ಜನತೆಗೆ ಶಾಕಿಂಗ್ ನ್ಯೂಸ್: ಕತ್ತಲಲ್ಲಿ ಮುಳುಗಲಿದೆ ಇಡೀ ಭಾರತ..? ಎಲೆಕ್ಟ್ರಿಸಿಟಿ ರೇಷನಿಂಗ್ ಜಾರಿ..? ಕಲ್ಲಿದ್ದಲು ಕೊರತೆ ತಂದ ಆತಂಕ
ಮಹಾರಾಷ್ಟ್ರದಲ್ಲಿ ಪೇಶ್ವೆಗಳ ಕಾಲದಲ್ಲಿ ಆನಂದಿಬಾಯಿ ಎಂಬ ಮಹಿಳೆ ಇದ್ದಳು. ‘ಧ’ ಅಕ್ಷರ ‘ಮ’ ಮಾಡಿ ಷಡ್ಯಂತ್ರ ಮಾಡಿದ್ದಳು. ಅದೇ ರೀತಿ ಇಲ್ಲಿಯೂ ಒಬ್ಬಳು ಆನಂದಿಬಾಯಿ ಇದ್ದಾಳೆ ‘ಧ’ ಇದ್ದುದನ್ನು ‘ಮ’ ಮಾಡಿ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾಳೆ ಎಂದು ವಾಗ್ದಾಳಿ ನಡೆಸಿದ್ದಾರೆ.