ಹೈದರಾಬಾದ್: ಮರ್ಸಿಡೀಸ್ ಕಾರಿನಲ್ಲಿ ಪ್ರಭಾವಿ ಕುಟುಂಬಕ್ಕೆ ಸೇರಿದ ಐವರು ಕಾಮುಕರು ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಅಮಾನುಷ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ಈ ಕೃತ್ಯದಲ್ಲಿ ಶಾಸಕರೊಬ್ಬರ ಪುತ್ರ ಕೂಡ ಇದ್ದಾನೆ ಎನ್ನಲಾಗಿದೆ. ಶಾಸಕರ ಪುತ್ರ ಸೇರಿದಂತೆ ಐವರು ಅಪ್ರಾಪ್ತರು ಬಾಲಕಿ ಮೇಲೆ ಕಾರಿನಲ್ಲಿ ಗ್ಯಾಂಗ್ ರೇಪ್ ನಡೆಸಿದ್ದು, ಇಡೀ ದೇಶವೇ ಬೆಚ್ಚಿ ಬಿದ್ದಿದೆ.
17 ವರ್ಷದ ಸಂತ್ರಸ್ತಳನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ಜ್ಯುಬಿಲಿ ಹಿಲ್ಸ್ ಪೊಲೀಸರು ಐಪಿಸಿ ಸೆಕ್ಷನ್ 354-ಗ್ಯಾಂಗ್ ರೇಪ್ ಹಾಗೂ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಓರ್ವ ಆರೋಪಿ ಎಂಇಐಎಂ ಶಾಸಕನ ಪುತ್ರ, ಮತ್ತೋರ್ವ ಮೈನಾರಿಟಿ ಚೇರಮನ್ ಅಧ್ಯಕ್ಷರ ಮಗ ಎಂದು ಬಿಜೆಪಿ ಆರೋಪಿಸಿದ್ದು, ಆರೋಪಿಗಳನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದೆ.