ಬೆಂಗಳೂರು: ಶಾಲೆಗಳನ್ನು ಪುನರಾರಂಭಿಸುವಂತೆ ತಜ್ಞರು ಹೇಳುತ್ತಿದ್ದಾರೆ. ಆದರೆ ಕೋವಿಡ್ ಎರಡನೇ ಅಲೆ ಇನ್ನೂ ಮುಕ್ತಾಯವಾಗಿಲ್ಲ. ಮೂರನೆ ಅಲೆ ಆತಂಕ ಕೂಡ ಶುರುವಾಗಿರುವುದರಿಂದ ಶಾಲೆ ಆರಂಭದ ಬಗ್ಗೆ ಆತುರದ ನಿರ್ಧಾರ ಸರಿಯಲ್ಲ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಶಾಲೆಗಳಿಲ್ಲದೇ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ ನಿಜ. ಮಕ್ಕಳ ವಿದ್ಯಾಭ್ಯಾಸ ಮುಖ್ಯ. ಆದರೆ ಶಿಕ್ಷಣದ ಜೊತೆಗೆ ಮಕ್ಕಳ ಜೀವ ಕೂಡ ಬಹಳ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಗಮನ ಹರಿಸಬೇಕಿದೆ ಎಂದರು.
BIG BREAKING: ಇಂದು ಮಧ್ಯಾಹ್ನ 3 ಗಂಟೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪತ್ರಿಕಾಗೋಷ್ಟಿ – ಮಹತ್ವದ ಘೋಷಣೆ ಸಾಧ್ಯತೆ
ಕೊರೊನಾ ಎರಡನೇ ಅಲೆ ಯಾವಾಗ ಅಂತ್ಯವಾಗುತ್ತೆ ಎಂಬುದೂ ಮಾಹಿತಿ ಇಲ್ಲ. ಜುಲೈ 5ರವರೆಗಾದರೂ ಕಾದು ನೋಡಬೇಕು. ಹಂತ ಹಂತವಾಗಿ ಸೋಂಕು ಕಡಿಮೆಯಾಗುತ್ತಿದೆ. ಕೊನೇ ಪಕ್ಷ ಲಸಿಕೆ ಶೇ.70ರಷ್ಟು ವಿತರಣೆಯಾಗುವವರೆಗೆ ಕಾಯುವುದು ಉತ್ತಮ. ಮಕ್ಕಳ ಶಿಕ್ಷಣದ ಬಗ್ಗೆ ಕಾಳಜಿ ಇದೆ. ಆದರೆ ಅವರ ಬದುಕು, ಜೀವದ ಬಗ್ಗೆಯೂ ಯೋಚಿಸಬೇಕು ಎಂದು ಹೇಳಿದರು.