ಬೆಂಗಳೂರು: ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬೆನ್ನಲ್ಲೇ ಇದೀಗ ಶಾಲಾ ಮಕ್ಕಳಲ್ಲಿ ಹೊಸ ರೋಗ ಪತ್ತೆಯಾಗಿದ್ದು, ಪೋಷಕರು ಆತಂಕಕ್ಕೀಡಾಗಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ ಶಾಲಾ ಮಕ್ಕಳಲ್ಲಿ ಕೈ, ಕಾಲು ಹಾಗೂ ಬಾಯಿ ರೋಗಗಳು ಕಂಡುಬರುತ್ತಿದ್ದು, ಇದು ಮಕ್ಕಳಿಂದ ಮಕ್ಕಳಿಗೆ ಹರಡುವ ಆತಂಕ ಎದುರಾಗಿದೆ. ಮಕ್ಕಳಿಗೆ ಕೈ-ಕಾಲು ಹಾಗೂ ಬಾಯಿ ಸುತ್ತ ಗುಳ್ಳೆಗಳು ಕಾಣಿಸಿಕೊಳ್ಳುತ್ತಿವೆ. ಈ ಗುಳ್ಳೆಗಳ ಪರಿಣಾಮ ಮಕ್ಕಳು ತೀವ್ರ ಜ್ವರದಿಂದ ಬಳಲುತ್ತಿದ್ದಾರೆ.
15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಈ ರೋಗ ಕಂಡುಬಂದಿದ್ದು, ಮಕ್ಕಳಲ್ಲಿ ಕಂಡುಬರುತ್ತಿರುವ ಈ ಹೊಸ ರೋಗ ಲಕ್ಷಣಗಳ ಬಗ್ಗೆ ಪೋಷಕರು ಎಚ್ಚರ ವಹಿಸುವಂತೆ ಹಾಗೂ ತಕ್ಷಣ ಚಿಕಿತ್ಸೆ ಕೊಡಿಸುವಂತೆ ಬೆಂಗಳೂರಿನ ಶಾಲೆಗಳಿಗೆ ಸೂಚಿಸಲಾಗಿದೆ.