ಕಲಬುರ್ಗಿ: ಕೊಡಗಿನ ಶಾಲೆಯಲ್ಲಿ ಭಜರಂಗದಳದಿಂದ ಶಸ್ತ್ರಾಸ್ತ್ರ ತರಬೇತಿ ವಿಚಾರವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಕಾರ್ಯಕರ್ತರ ಆತ್ಮರಕ್ಷಣೆಗಾಗಿ ತರಬೇತಿ ನೀಡಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಕಲಬುರ್ಗಿಯಲ್ಲಿ ಮಾತನಾಡಿದ ಸಿ.ಟಿ.ರವಿ, ಮಕ್ಕಳಿಗೆ, ವಿದ್ಯಾರ್ಥಿಗಳಿಗೆ ಶಸ್ತ್ರಾಸ್ತ್ರ ತರಬೇತಿ ನೀಡಿಲ್ಲ. ಭಜರಂಗದಳ ಕಾರ್ಯಕರ್ತರಿಗೆ ತರಬೇತಿ ನೀಡಲಾಗಿದೆ. ಆತ್ಮರಕ್ಷಣೆಗಾಗಿ ತರಬೇತಿ ಕೊಡಲಾಗಿದೆ ಎಂದರು.
ಈಗ ಪೊಲೀಸರಿಗೆ ಯಾವ ರೀತಿ ತರಬೇತಿ ಕೊಡುತ್ತಾರೋ ಹಾಗೆ ತರಬೇತಿ ನೀಡಲಾಗಿದೆ ಎಕೆ-47 ನಿಂದ ತರಬೇತಿ ಕೊಟ್ಟಿಲ್ಲ. ಬಾಂಬ್ ಹಾಕುವ ಬಗ್ಗೆಯೂ ತರಬೇತಿ ಕೊಟ್ಟಿಲ್ಲ, ಏರ್ ಗನ್ ನಿಂದ ತರಬೇತಿ ನೀಡಲಾಗಿದೆ ಅದರಲ್ಲಿ ತಪ್ಪೇನು? ಎಂದು ಪ್ರಶ್ನಿಸಿದ್ದಾರೆ.
ಶಿವಮೊಗ್ಗದಲ್ಲೊಂದು ಘೋರ ಘಟನೆ; ಕಾರು ಡಿಕ್ಕಿಯಾಗಿ 8 ಎಮ್ಮೆಗಳು ಸಾವು
ಪ್ರತಿವರ್ಷವೂ ಭಜರಂಗದಳದಿಂದ ಶಸ್ತ್ರಾಸ್ತ್ರ ತರಬೇತಿ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಹಾಗೆ ಈ ವರ್ಷ ಕೂಡ ಆಯೋಜಿಸಲಾಗಿದೆ ಎಂದು ಹೇಳಿದರು.