ವಿಜಯಪುರ: ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ. ರವಿ, ಶಾದಿ ಭಾಗ್ಯ ಎಂಬ ಮನೆಹಾಳ ಯೋಜನೆ ಜಾರಿಗೆ ತಂದದ್ದು ಸಿದ್ದರಾಮಯ್ಯ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಿಂದಗಿ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸಿದ ಸಿ.ಟಿ. ರವಿ, ಒಂದು ಸಮುದಾಯದ ಅನುಕೂಲಕ್ಕಾಗಿ ಶಾದಿ ಭಾಗ್ಯ ಎಂಬ ಮನೆಹಾಳು ಯೋಜನೆಯನ್ನು ಸಿದ್ದರಾಮಯ್ಯ ಜಾರಿಗೆ ತಂದರು. ಇದು ಕೇವಲ ಒಂದು ಸಮುದಾಯಕ್ಕಾಗಿ ಮಾತ್ರ ಬೇರೆ ಯಾವುದೇ ಸಮಾಜದ ಜನರಿಗಾಗಿ ತಂದಿಲ್ಲ. ಅಲ್ಲಿಯೂ ಒಂದು ಸಮುದಾಯದ ಓಲೈಕೆ ರಾಜಕಾರಣ ನಡೆಸಿದರು ಎಂದು ಹೇಳಿದರು.
ಪೋರ್ನ್ ಹಬ್ ಮೂಲಕ ಗಣಿತದ ಪಾಠ ಹೇಳಿಕೊಟ್ಟ ಶಿಕ್ಷಕ..! ಇದರ ಹಿಂದಿದೆ ಈ ಕಾರಣ
ಶಾಲಾ ಮಕ್ಕಳ ಪ್ರವಾಸ ಕಾರ್ಯಕ್ರಮದಲ್ಲಿಯೂ ವಿಷಬೀಜ ಬಿತ್ತಿದ್ದವರು ಸಿದ್ದರಾಮಯ್ಯ. ಮಕ್ಕಳನ್ನು ದೇವರ ಸಮಾನ ಎನ್ನುತ್ತಾರೆ ಆದರೆ ಅಲ್ಲಿಯೂ ಜಾತಿ ಆಧಾರದ ಮೇಲೆ ಪ್ರವಾಸ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಯಿತು. ಈ ಮೂಲಕ ಚಿಕ್ಕಪುಟ್ಟ ಮಕ್ಕಳಲ್ಲಿಯೂ ಜಾತಿ ವಿಷಬೀಜ ಬಿತ್ತುವ ಕೆಲಸ ಮಾಡಿದರು. ಕಾಂಗ್ರೆಸ್ ನಾಯಕರು ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಸಿಂದಗಿಯಲ್ಲಿಯೂ ಜಾತಿ ಆಧಾರದ ಮೇಲೆ ಮತ ಕೇಳಲು ಮುಂದಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.