ಬೆಂಗಳೂರು: ಪಿ ಎಸ್ ಐ ಹುದ್ದೆ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳಿಂದ ಬಂಧನಕ್ಕೀಡಾಗಿರುವ ಎಡಿಜಿಪಿ ಅಮೃತ್ ಪೌಲ್ ಬೇಡಿಕೆ ಕೇಳಿ ಸ್ವತಃ ಅಧಿಕಾರಿಗಳೇ ಕಂಗಾಲಾಗಿದ್ದಾರೆ.
ಜುಲೈ 4ರಂದು ಬಂಧನಕ್ಕೀಡಾಗಿದ್ದ ಅಮೃತ್ ಪೌಲ್ ಅವರನ್ನು ಸಿಐಡಿ ಕಸ್ಟಡಿಗೆ ಪಡೆಯಲಾಗಿದ್ದು, ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ. ಇದೀಗ ಜೈಲಿನಲ್ಲಿ ವಿಚಾರಣೆ ವೇಳೆ ಅಧಿಕಾರಿಗಳಿಗೆ ತಲೆ ತಿನ್ನುತ್ತಿದ್ದಾರೆ ಮಾಜಿ ಎಡಿಜಿಪಿ.
ತನಗೆ ಟೆನ್ ಶನ್ ಆಗುತ್ತಿದೆ, ನಿದ್ದೆ ಬರುತ್ತಿಲ್ಲ. ಸಿಗರೇಟ್ ಹಾಗೂ ವಿಸ್ಕಿ ತಂದು ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ. ಇದನ್ನೆಲ್ಲ ತಂದುಕೊಡಲು ಜೈಲ್ ರೂಲ್ಸ್ ಒಪ್ಪುವುದಿಲ್ಲ. ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದೇ ವೇಳೆ ಸಿಐಡಿ ಅಧಿಕಾರಿ ಡಿಜಿಪಿ ಸಂಧೂ ಹೈಕೋರ್ಟ್ ಗೆ ತನಿಖಾ ವರದಿ ಸಲ್ಲಿಸಿದ್ದಾರೆ.