ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ವಿವೇಕ ಶಾಲಾ ಕೊಠಡಿ ಹಾಗೂ ಕೇಸರಿ ಬಣ್ಣ ಬಳಿಯುವ ರಾಜ್ಯ ಸರ್ಕಾರದ ಕ್ರಮದ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಈ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಎಲ್ಲಾ ವಿಚಾರಗಳಲ್ಲೂ ಯಾಕೆ ರಾಜಕೀಯ ಮಾಡ್ತಾರೆ ಗೊತ್ತಿಲ್ಲ. ಕೇಸರಿ ಬಣ್ಣ ನಮ್ಮ ರಾಷ್ಟ್ರಧ್ವಜದಲ್ಲಿ ಇಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ವಿವೇಕಾನಂದರ ಹೆಸರಿನಲ್ಲಿ ವಿವೇಕ ಯೋಜನೆ ಮಾಡುತ್ತಿದ್ದೇವೆ. ’ವಿವೇಕ’ ಎಂದರೆ ಜ್ಞಾನದ ಸಂಕೇತ ಎಂದು ಹೇಳಿದ್ದಾರೆ.