ಬ್ಯಾಂಕುಗಳ ವಿಲೀನ ಹಾಗೂ ಖಾಸಗಿಕರಣಕ್ಕೆ ಬ್ಯಾಂಕ್ ಉದ್ಯೋಗಿಗಳ ಒಕ್ಕೂಟ ತನ್ನ ತೀವ್ರ ವಿರೋಧವನ್ನು ತೋರಿಸುತ್ತಿದ್ದು ಇದರ ಮಧ್ಯೆಯೂ ಕೇಂದ್ರ ಸರ್ಕಾರ ಐಡಿಬಿಐ ಬ್ಯಾಂಕ್ ಖಾಸಗಿಕರಣಕ್ಕೆ ಸಜ್ಜಾಗಿದೆ.
ಐಡಿಬಿಐ ಬ್ಯಾಂಕ್ ನಲ್ಲಿ ಭಾರತೀಯ ಜೀವ ವಿಮಾ ನಿಗಮವು ಶೇಕಡ 94 ರಷ್ಟು ಷೇರುಗಳನ್ನು ಹೊಂದಿದ್ದು, ಈಗ ಸರ್ಕಾರ ಮತ್ತು ಎಲ್ಐಸಿಯು ಒಟ್ಟು ಶೇಕಡ 51% ರಷ್ಟು ಷೇರುಗಳನ್ನು ಮಾರಾಟ ಮಾಡಲು ನಿರ್ಧರಿಸಿವೆ ಎನ್ನಲಾಗಿದೆ.
ಅಲ್ಲದೆ ಮುಂದಿನ ದಿನಗಳಲ್ಲಿ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಗಳನ್ನು ಸಹ ಖಾಸಗಿಕರಣಗೊಳಿಸುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದ್ದು, ಇದಕ್ಕಾಗಿ ಹೊಸ ವಿಧೇಯಕವನ್ನು ಮಂಡನೆ ಮಾಡಲಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ.