ಹುಬ್ಬಳ್ಳಿ: ವಿಮಾನ ಲ್ಯಾಂಡಿಂಗ್ ವೇಳೆ ಟೈರ್ ಸ್ಫೋಟಗೊಂಡ ಘಟನೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ನಡೆದಿದೆ. ನಿನ್ನೆ ಸಂಜೆಯೇ ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಇಂಡಿಗೋ 6e 7979 ವಿಮಾನ ಟೈರ್ ಸ್ಫೋಟಗೊಂಡಿದೆ. ಕೇರಳದ ಕಣ್ಣೂರಿನಿಂದ ಆಗಮಿಸಿದ್ದ ವಿಮಾನ ಹುಬ್ಬಳ್ಳಿಯಲ್ಲಿ ಲ್ಯಾಂಡಿಂಗ್ ವೇಳೆ ಈ ದುರ್ಘಟನೆ ಸಂಭವಿಸಿದೆ.
ನಿಮಗೆ ತಿಳಿದಿರಲಿ ʼಪೈನಾಪಲ್ʼ ನ ಹತ್ತು ಹಲವು ಪ್ರಯೋಜನಗಳು
ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ ಎಂದು ತಿಳಿದುಬಂದಿದೆ.