ರಷ್ಯಾ ಹಾಗೂ ಉಕ್ರೇನ್ ನಡುವಿನ ಬಿಕ್ಕಟ್ಟು ದಿನದಿಂದ ದಿನಕ್ಕೆ ವಿಕೋಪದ ರೂಪವನ್ನು ಪಡೆಯುತ್ತಲೇ ಇದೆ. ರಷ್ಯಾವು ಉಕ್ರೇನ್ ವಿರುದ್ಧ ಮಿಲಿಟರಿ ಕಾರ್ಯಾಚರಣೆಯನ್ನು ಆರಂಭಿಸಿರುವ ಬೆನ್ನಲ್ಲೇ ಉಕ್ರೇನ್ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ.
ಇತ್ತ ಉಕ್ರೇನ್ನಲ್ಲಿ ನೆಲೆಸಿರುವ ಭಾರತೀಯರನ್ನು ಸುರಕ್ಷಿತವಾಗಿ ಮನೆಗೆ ತರಲು ಉಕ್ರೇನ್ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ಇದೀಗ ದೆಹಲಿಗೆ ಹಿಂತಿರುತ್ತಿದೆ. ಉಕ್ರೇನ್ ತನ್ನ ಪೂರ್ವ ಭಾಗಗಳಲ್ಲಿ ರಷ್ಯಾದ ಮಿಲಿಟರಿ ಕಾರ್ಯಾಚರಣೆಯನ್ನು ನಡೆಸುತ್ತಿರುವುದು ಗಮನಕ್ಕೆ ಬಂದ ಬಳಿಕ ವಾಯು ಪ್ರದೇಶಗಳನ್ನು ಬಂದ್ ಮಾಡಿದೆ ಎಂದು ಪ್ರಕಟಣೆ ನೀಡಿದ ಬಳಿಕ ಏರ್ ಇಂಡಿಯಾ ವಿಮಾನ ದೆಹಲಿಗೆ ಹಿಂತಿರುಗಿದೆ ಎಂದು ತಿಳಿದುಬಂದಿದೆ.