alex Certify BIG NEWS: ವಿಮಾನಗಳು ಕ್ಯಾನ್ಸಲ್​, ಸಾರ್ವಜನಿಕ ಸಾರಿಗೆಯೂ ಬಂದ್​; ಉಕ್ರೇನ್​ನಲ್ಲಿರುವ ಭಾರತೀಯ ವಿದ್ಯಾರ್ಥಿಗಳಿಗೆ ಸಂಕಷ್ಟ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ವಿಮಾನಗಳು ಕ್ಯಾನ್ಸಲ್​, ಸಾರ್ವಜನಿಕ ಸಾರಿಗೆಯೂ ಬಂದ್​; ಉಕ್ರೇನ್​ನಲ್ಲಿರುವ ಭಾರತೀಯ ವಿದ್ಯಾರ್ಥಿಗಳಿಗೆ ಸಂಕಷ್ಟ..!

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಇಂದು ಉಕ್ರೇನ್​ ಮೇಲೆ ಯುದ್ಧ ಘೋಷಣೆ ಮಾಡಿದ ಬಳಿಕ ಉಕ್ರೇನ್​​ನಲ್ಲಿ ಪರಿಸ್ಥಿತಿ ಸಂಪೂರ್ಣ ಬಿಗಡಾಯಿಸಿದೆ. ಈ ವಿಚಾರವಾಗಿ ಮಾತನಾಡಿರುವ ಉಕ್ರೇನ್​ನಲ್ಲಿರುವ ಭಾರತೀಯ ವಿದ್ಯಾರ್ಥಿ ಶಿವ್​, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​​ ದೂರದರ್ಶನದಲ್ಲಿ ಭಾಷಣ ಮಾಡಿ ಯುದ್ಧ ಘೋಷಣೆ ಮಾಡುವವರೆಗೂ ಉಕ್ರೇನ್​ನಲ್ಲಿ ಪರಿಸ್ಥಿತಿ ಸಾಮಾನ್ಯವಾಗಿತ್ತು ಎಂದು ವಿವರಿಸಿದ್ದಾರೆ.

ಈ ಸುದ್ದಿ ತಿಳಿಯುತ್ತಿದ್ದಂತೆಯೇ ಶಿವ್​ ತಮ್ಮ ಬ್ಯಾಗ್​ನ್ನು ಪ್ಯಾಕ್​ ಮಾಡಿ ತಾನಿದ್ದ ನಗರವನ್ನು ತೊರೆದು ರಾಜಧಾನಿ ಕೈವ್​ಗೆ ಹೊರಟರು. ಕೈವ್​ನಲ್ಲಿ ಏರ್​ ಇಂಡಿಯಾ ವಿಮಾನವನ್ನು ಏರಿ ಸುರಕ್ಷಿತವಾಗಿ ಭಾರತಕ್ಕೆ ಮರಳಲು ಯೋಜಿಸಿದ್ದರು.

ಆದರೆ ಕೈವ್​ಗೆ ಬರುತ್ತಿದ್ದಂತೆಯೇ ವಿಮಾನ ನಿಲ್ದಾಣಗಳನ್ನು ಬಂದ್​ ಮಾಡಲಾಗಿದೆ ಎಂಬ ವಿಚಾರ ಶಿವ್​ಗೆ ತಿಳಿದಿದೆ. ಈಗಂತೂ ಸಾರ್ವಜನಿಕ ಸಾರಿಗೆಗಳನ್ನೂ ಬಂದ್​ ಮಾಡಲಾಗಿದ್ದು ಶಿವ್​ಗೆ ವಿಶ್ವವಿದ್ಯಾಲಯಕ್ಕೆ ಮರಳಲೂ ಆಗುತ್ತಿಲ್ಲ. ಇವರ ಜೊತೆಯಲ್ಲಿ ಇನ್ನೂ 50 ಮಂದಿ ವಿದ್ಯಾರ್ಥಿಗಳಿದ್ದು ಎಲ್ಲರೂ ಕೈವ್​ನ ರೈಲ್ವೆ ನಿಲ್ದಾಣದಲ್ಲಿ ನಿಂತಿದ್ದಾರೆ.

ಈ ವಿಚಾರವಾಗಿ ಮಾತನಾಡಿದ ಶಿವ್​, ನನಗೆ ಏನನ್ನೂ ಅಂದಾಜಿಸಲು ಸಾಧ್ಯವಾಗುತ್ತಿಲ್ಲ. ನಮಗೆ ಭಾರತಕ್ಕೆ ಮರಳಲು ಒಂದು ವಿಮಾನ ಸಿಕ್ಕರೆ ಸಾಕು ಎಂದಿದ್ದಾರೆ.

ಶಿವ್​ ಭಾರತದಲ್ಲಿರುವ ತಮ್ಮ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದಾರೆ ಮತ್ತು ಕೆಲವು ವಿದ್ಯಾರ್ಥಿಗಳು ಸಹಾಯಕ್ಕಾಗಿ ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿದ್ದಾರೆ ಎಂದು ಹೇಳಿದರು. ಆದರೆ, ಅವರ ವಿಶ್ವವಿದ್ಯಾಲಯವು ಇನ್ನೂ ಅಂತರರಾಷ್ಟ್ರೀಯ ವಿದ್ಯಾರ್ಥಿಗಳೊಂದಿಗೆ ಸಂಪರ್ಕಕ್ಕೆ ಬಂದಿಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Chytré triky pro vaši kuchyni, zahradu a život: objevte naše nejlepší tipy a triky pro vaši každodenní rutinu. Uvařte si lahodné pokrmy a pěstujte si zeleninu jako profesionálové. Naše užitečné články vám pomohou vytvořit skvělý životní styl. Najít kočku: vrcholový test pozornosti на Kde se skrývá autíčko: jen Vynikající jemné bramborové placky s Jak najít Tajemná výzva: pouze 2 % lidí Pikantní krabí salát s fazolemi: lahodný recept na Vyzkoušejte to, jen géniusové: Proč je IQ test se optickým klamem: Najděte Top 10 potravin pro dlouhověkost: Co Získat nejnovější lifestylové tipy, kuchařské triky a užitečné články o zahradničení na našem webu! Najdete zde spoustu inspirace pro vylepšení svého každodenního života a získání nových dovedností. Buďte součástí naší komunity a objevujte společně s námi radost z jednoduchých, ale efektivních triků pro pohodlnější a zdravější život!