ಬೆಂಗಳೂರು: ಸಿಎಂ ಹುದ್ದೆಗೆ 2,500 ಕೋಟಿ ರೂಪಾಯಿ ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ವಿಪಕ್ಷ ಕಾಂಗ್ರೆಸ್ ನಾಯಕರಿಗೆ ಸರ್ಕಾರದ ವಿರುದ್ಧ ವಾಗ್ದಾಳಿಗೆ ಮತ್ತೊಂದು ಟೀಕಾಸ್ತ್ರ ಸಿಕ್ಕಂತಾಗಿದೆ.
ಬಿಜೆಪಿಯ ಭ್ರಷ್ಟಾಚಾರದ ರೇಟ್ ಕಾರ್ಡ್ ಬೆಳೆಯುತ್ತಿದೆ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಕಿಡಿ ಕಾರಿದ್ದಾರೆ. ಸಿಎಂ ಹುದ್ದೆಗೆ -₹2500Cr
PSI ಹುದ್ದೆಗೆ – ₹ 80 ಲಕ್ಷ, ಮಂತ್ರಿ ಗಿರಿಗೆ – 50-70Cr, ಕಾಮಗಾರಿಗಳಿಗೆ -40%, ಮಠಗಳಿಗೆ – 30%, ವರ್ಗಾವಣೆ – FIXED RATE ಹೀಗೆ ವಿಧಾನಸೌಧವನ್ನು ‘ವ್ಯಾಪಾರ ಸೌಧ’ ಮಾಡಿದ್ದೇ ಬಿಜೆಪಿ ಸಾಧನೆಯಾಗಿದೆ ಎಂದು ಗುಡುಗಿದ್ದಾರೆ.
ಈ ನಡುವೆ ಪಿಎಸ್ಐ ಅಕ್ರಮ ಆಡೀಯೋ ಬಿಡುಗಡೆ ವಿಚಾರವಾಗಿ ಸಿಐಡಿ ನೀಡಿದ್ದ ಮೂರು ನೋಟೀಸ್ ಗೂ ಪ್ರಿಯಾಂಕ್ ಖರ್ಗೆ ಲಿಖಿತ ಉತ್ತರ ನೀಡಿದ್ದಾರೆ. 6 ಪುಟಗಳ ಸುದೀರ್ಘ ಉತ್ತರವನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ.