ಬೆಂಗಳೂರು: ಮೇ.10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಪ್ರತಿ ಕ್ಷೇತ್ರದ ಮೇಲೂ ನಿಗಾ ವಹಿಸಿದೆ. ಪ್ರಮುಖವಾಗಿ ಬೆಂಗಳೂರಿನ 28 ಕ್ಷೇತ್ರಗಳಿಗೆ ಚುನಾವಣಾ ವೀಕ್ಷಕರನ್ನು ನೇಮಕ ಮಾಡಲಾಗಿದೆ.
14 ಸಾಮಾನ್ಯ ವೀಕ್ಷಕರು, ನಾಲ್ವರು ಪೊಲೀಸ್ ವೀಕ್ಷಕರು, 24 ಜನ ಖರ್ಚುವೆಚ್ಚಗಳ ವೀಕ್ಷಕರನ್ನು ನೇಮಕ ಮಾಡಿ ಚುನಾವಣಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಯಾವುದೇ ಅಕ್ರಮ ನಡೆಯದಂತೆ ವೀಕ್ಷಕರು ಹದ್ದಿನ ಕಣ್ಣಿಡಲಿದ್ದಾರೆ.
ಕ್ಷೇತ್ರವಾರು ವೀಕ್ಷಕರು:
ಮಹದೇವಪುರ -ಐ ಎ ಎಸ್ ಅಧಿಕಾರಿ ಡಾ.ನಾರಾಯಣಸ್ವಾಮಿ
ಯಶವಂತಪುರ ಹಾಗೂ ದಾಸಹಳ್ಳಿ – ಐಎ ಎಸ್ ಅಧಿಕಾರಿ ಕಾಮಿನಿ ಚೌಹಾಣ್ ರತನ್
ಆರ್ ಆರ್ ನಗರ ಹಾಗು ಶಿವಾಜಿನಗರ- ಅಹಮದ್ ನದೀಮ್
ಗೋವಿಂದರಾಜನಗರ ಹಾಗು ಚಿಕ್ಕಪೇಟೆ- ಲೋಚನ್ ಸೆಹ್ರಾ
ಜಯನಗರ ಹಾಗೂ ಬೊಮ್ಮನಹಳ್ಳಿ-ಸಮೀರ್ ವರ್ಮಾ
ವಿಜಯನಗರ ಹಾಗೂ ಬಸವನಗುಡಿ – ಬಿ.ಬಾಲಮಯ ದೇವಿ
ಯಲಹಂಕ ಹಾಗೂ ಬ್ಯಾಟರಾಯನಪುರ – ದಾ.ಪ್ರತಿಭಾ ಸಿಮ್ಗ್
ಕೆ.ಆರ್.ಪುರ ಹಾಗು ಆನೇಕಲ್ – ಕೆ.ವೀರರಾಘವ ರಾವ್
ಮಲ್ಲೇಶ್ವರಂ ಹಾಗೂ ಹೆಬ್ಬಾಳ – ದೀಪಕ್ ಆನಂದ್
ಸರ್ವಜ್ಞನಗರ ಹಾಗೂ ಸಿ.ವಿ.ರಾಮನ್ ನಗರ – ಡಾ.ಕೆ.ವಾಸುಕಿ
ರಾಜಾಜಿನಗರ ಹಾಗೂ ಚಾಮರಾಜಪೇಟೆ – ಸುಶೀಲ್ ಕುಮಾರ್ ಪಟೇಲ್
ಮಹಾಲಕ್ಷ್ಮೀ ಲೇಔಟ್ ಹಾಗೂ ಪುಲಕೇಶಿನಗರ- ಹರಿಚಂದನ ದಾಸರಿ
ಶಾಂತಿನಗರ ಹಾಗೂಗಾಂಧಿನಗರ – ಅನಿಮೇಶ್ ಕುಮಾರ್
ಪದ್ಮನಾಭನಗರ ಹಾಗೂ ಬಿಟಿಎಂ ಲೇಔಟ್ – ಅವದೇಶ್ ಕುಮಾರ್ ತಿವಾರಿ