ಬೆಂಗಳೂರು: ಜನಸ್ಪಂದನ ಸಮಾವೇಶದಿಂದಲೂ ದೂರ ಉಳಿದಿದ್ದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಇದೀಗ ವಿಧಾನಮಂಡಲ ಅಧಿವೇಶನಕ್ಕೂ ಗೈರಾಗಿದ್ದಾರೆ.
ನಿನ್ನೆಯಿಂದ ವಿಧಾನಮಂಡಲ ಅಧಿವೇಶನ ಆರಂಭವಾಗಿದೆ. ಆದಾಗ್ಯೂ ವಿಧಾನಸಭಾ ಕಲಾಪಕ್ಕೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹಾಜರಾಗಿಲ್ಲ ನಿನ್ನೆ, ಇಂದು ಕೂಡ ಸದನಕ್ಕೆ ಈಶ್ವರಪ್ಪ ಗೈರಾಗಿದ್ದು, ಪಕ್ಷದ ನಾಯಕರ ಬಗ್ಗೆ ಅಸಮಾಧಾನಗೊಂಡು ಕಲಾಪದಿಂದ ದೂರ ಇದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ನಡೆಯುತ್ತಿರುವ ಮೊದಲ ಅಧಿವೇಶನ ಇದಾಗಿದೆ. ತಮಗೆ ಸಚಿವ ಸ್ಥಾನ ವಿಚಾರದಲ್ಲಿ ಬೆಳವಣಿಗೆಗಳು ಕಾಣದ ಹಿನ್ನೆಲೆಯಲ್ಲಿ ಸಾಕಷ್ಟು ಬೇಸರದಲ್ಲಿರುವ ಈಶ್ವರಪ್ಪ ಈಗ ವಿಧಾನಸಭಾ ಕಲಾಪದಿಂದಲೂ ದೂರ ಉಳಿದಿದ್ದಾರೆ ಎನ್ನಲಾಗುತ್ತಿದೆ.