ಬೆಳಗಾವಿ: ರಾಜ್ಯ ಸರ್ಕಾರ ಒಂದೆಡೆ ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್ ಉಚಿತ ವಿದ್ಯುತ್ ಘೋಷಣೆ ಮಾಡಿರುವ ಬೆನಲ್ಲೇ ಕೆಇಆರ್ ಸಿ ವಿದ್ಯುತ್ ದರ ಹೆಚ್ಚಳ ಮಾಡಿದ್ದು, ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಗಳು ಹೆಚ್ಚುತ್ತಿವೆ.
ವಿದ್ಯುತ್ ದರ ಏರಿಕೆ ಖಂಡಿಸಿ ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ಸಣ್ಣ ಕೈಗಾರಿಕೋದ್ಯಮಿಗಳು ಪ್ರತಿಭಟನೆ ನಡೆಸಿದ್ದು, ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ವಿದ್ಯುತ್ ದರ ಏರಿಕೆಯಿಂದಾಗಿ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ಹೊಡೆತ ಬೀಳುತ್ತಿವೆ. ಮೊದಲಿನ ಬಿಲ್ ಗಿಂತ ಮೂರುಪಟ್ಟು ಹೆಚ್ಚು ಬಿಲ್ ಬಂದಿವೆ. ತಕ್ಷಣ ಸರ್ಕಾರ ವಿದ್ಯುತ್ ದರ ಕಡಿಮೆ ಮಾಡಬೇಕು ಎಂದು ಆಗ್ರಹಿಸಿವೆ.
ಮಹಾರಾಷ್ಟ್ರ ಸರ್ಕರ ಎಲ್ಲಾ ವಿಧದ ಸೌಕರ್ಯ ಕೊಡುತ್ತೇವೆ ಮಹಾರಾಷ್ಟ್ರಕ್ಕೆ ಬನ್ನಿ ಎಂದು ಆಹ್ವಾನಿಸಿದೆ. ನಮ್ಮ ಬೇಡಿಕೆಗೆ ಸರ್ಕಾರ ಸ್ಪಂದಿಸದಿದ್ದರೆ ಮಹಾರಾಷ್ಟ್ರದತ್ತ ಹೋಗುವುದಾಗಿ ಕೈಗಾರಿಕೋದ್ಯಮಗಳು ಎಚ್ಚರಿಕೆ ನೀಡಿವೆ.