ಉಡುಪಿ: ನವರಾತ್ರಿ ಹಬ್ಬದ ಸಂದರ್ಭದಲ್ಲಿಯೇ ವಿದ್ಯುತ್ ದರ ಏರಿಕೆ ಮಾಡಿರುವ ಕ್ರಮಕ್ಕೆ ಸಾರ್ವಜನಿಕರು, ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದ್ದು, ಇದೀಗ ಇಂಧನ ಸಚಿವ ಸುನೀಲ್ ಕುಮಾರ್ ದರ ಏರಿಕೆ ಸಮರ್ಥಿಸಿಕೊಂಡಿದ್ದಾರೆ.
ವಿದ್ಯುತ್ ದರ ಏರಿಕೆ ವರ್ಷಕ್ಕೆ ಒಂದು ಬಾರಿ ನಡೆಯುತ್ತದೆ. ಕಲ್ಲಿದ್ದಲು ಬೆಲೆ ಏರಿಕೆ ಹೊಂದಾಣಿಕೆ ಮಾಡಿ ದರ ನಿಗದಿ ಆದೇಶ ಹೊರಡಿಸಲಾಗಿದೆ. 9 ವರ್ಷದಿಂದ 3 ತಿಂಗಳಿಗೊಮ್ಮೆ ಕಲ್ಲಿದ್ದಲು ದರ ನಿಗದಿಯಾಗುತ್ತದೆ. ಕಲ್ಲಿದ್ದಲು ಬೆಲೆ ಹೊಂದಾಣಿಕೆಗೋಸ್ಕರ ವಿದ್ಯುತ್ ದರ ಏರಿಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಪೇಸಿಎಂ ಅಭಿಯಾನ ನಡೆಸುತ್ತಿರುವ ಕಾಂಗ್ರೆಸ್ ನಾಯಕರು ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ. ಪೇಸಿಎಂ ಎಂಬುದು ಕಾಂಗ್ರೆಸ್ ನ ಸುಳ್ಳಿನ ಸರಮಾಲೆ ಎಂದು ವಾಗ್ದಾಳಿ ನಡೆಸಿದರು.