ನವದೆಹಲಿ: ಹಿಜಾಬ್ ಹಾಗೂ ಕೇಸರಿ ಶಾಲು ವಿಚಾರ ಬಹಳ ಸೂಕ್ಷ್ಮವಾದ ವಿಚಾರವಾಗಿದ್ದು, ಯಾರೂ ಕೂಡ ಪ್ರಚೋದನಕಾರಿ ಕೆಲಸ ಮಾಡುವಂತಿಲ್ಲ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ, ಹಿಜಾಬ್ ವಿವಾದ ಹೈಕೋರ್ಟ್ ನಲ್ಲಿದೆ. ನ್ಯಾಯಾಲಯದ ತೀರ್ಪು ಬರುವವರೆಗೆ ಎಲ್ಲರೂ ತಾಳ್ಮೆಯಿಂದ ವರ್ತಿಸಿ. ವಿದ್ಯಾರ್ಥಿಗಳು ಶಾಂತಿ, ಸೌಹಾರ್ದತೆಯನ್ನು ಕಾಪಾಡಬೇಕು ಎಂದು ಮನವಿ ಮಾಡಿದರು.
ಇದೊಂದು ಸೂಕ್ಷ್ಮ ವಿಚಾರ. ಯಾರೂ ಕೂಡ ಪ್ರಚೋದನೆ ನೀಡುವ ಕೆಲಸ ಮಾಡಬಾರದು. ಹೈಕೋರ್ಟ್ ತೀರ್ಪಿನ ಬಳಿಕ ಹಿಜಾಬ್ ವಿವಾದಕ್ಕೆ ಪರಿಹಾರ ಸಿಗುವ ವಿಶ್ವಾಸವಿದೆ. ತೀರ್ಪು ಬರುವವರೆಗೆ ಯಾವುದೇ ವಿವಾದ, ಅನಗತ್ಯ ಚರ್ಚೆಗಳು ಬೇಡ ಎಂದು ಹೇಳಿದರು.