ಬೆಂಗಳೂರು: ಆಪ್ತ ರಾಜಣ್ಣ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ಬಿ.ವೈ. ವಿಜಯೇಂದ್ರ ವಿರುದ್ಧ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ ಸಚಿವ ಶ್ರೀರಾಮುಲು, ನನ್ನ ಗಮನಕ್ಕೆ ತಂದಿದ್ದರೆ ಸರಿಪಡಿಸುವ ಪ್ರಯತ್ನ ಮಾಡುತ್ತಿದ್ದೆ. ಮಾಹಿತಿ ನೀಡದೇ ಏಕಾಏಕಿ ಕ್ರಮ ಕೈಗೊಂಡಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಯಾರೇ ಆಗಲಿ ಬೇರೆಯವರ ಹೆಸರು ದುರ್ಬಳಕೆ ಮಾಡುವುದು ತಪ್ಪು. ರಾಜಣ್ಣ ನನ್ನ ಪಿಎ ಅಲ್ಲ, ನನಗೆ ಗೊತ್ತಿರುವ ಹುಡುಗ. ನಮ್ಮ ಜೊತೆ ಕೆಲಸ ಮಾಡುತ್ತಿದ್ದ. ಯಾರೇ ತಪ್ಪು ಮಾಡಿದರೂ ಅವರಿಗೆ ಶಿಕ್ಷೆಯಾಗಬೇಕು. ಕಾನೂನು ರೀತಿ ಕ್ರಮ ಕೈಗೊಳ್ಳಲಿ. ಆದರೆ ಪ್ರಕರಣದ ಬಗ್ಗೆ ನನ್ನ ಗಮನಕ್ಕೆ ತರಬೇಕಿತ್ತು. ಎಲ್ಲಿಯೋ ಮಿಸ್ ಕಮ್ಯೂನಿಕೇಷನ್ ಆಗಿದೆ. ಹಾಗಾಗಿ ಸಿಎಂ ಹಾಗೂ ವಿಜಯೇಂದ್ರ ಇಬ್ಬರ ಜೊತೆಯೂ ಮಾತನಾಡುತ್ತೇನೆ ಎಂದರು.
ಸಚಿವ ಶ್ರೀರಾಮುಲು ಮನವೊಲಿಕೆಗೆ ಸಿಎಂ ಬಿ.ಎಸ್.ವೈ. ಯತ್ನ
ಇನ್ನು ಪಕ್ಷದಲ್ಲಿ ಹಿರಿಯ ನಾಯಕರನ್ನು ಕಡೆಗಣಿಸಲಾಗುತ್ತಿದೆ ಎಂಬ ವಿಚಾರವಾಗಿ ಹಿರಿಯರನ್ನು ಸೈಡ್ ಲೈನ್ ಮಾಡಲಾಗುತ್ತಿದೆ. ಇದು ಸಮಂಜಸವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.