ಇತ್ತೀಚೆಗಷ್ಟೇ ಉದ್ಘಾಟನೆಗೊಂಡಿದ್ದ ಬೆಂಗಳೂರು – ಮೈಸೂರು ‘ಎಕ್ಸ್ ಪ್ರೆಸ್ ವೇ’ ಟೋಲ್ ದರ ನಾಳೆಯಿಂದ ಮತ್ತಷ್ಟು ದುಬಾರಿಯಾಗಲಿದೆ. ಸರ್ವಿಸ್ ರಸ್ತೆ ಕಾಮಗಾರಿ ಪೂರ್ಣಗೊಳಿಸಿದೆ ಟೋಲ್ ಸಂಗ್ರಹಿಸುತ್ತಿರುವುದಕ್ಕೆ ಆರಂಭದಲ್ಲೇ ಆಕ್ರೋಶ ಕೇಳಿ ಬಂದಿದ್ದು, ಇದೀಗ ಇದರ ಹೊರೆ ಮತ್ತಷ್ಟು ಏರಿಕೆಯಾಗಿದೆ.
ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮ 2008ರ ಪ್ರಕಾರ ದರ ಹೆಚ್ಚಳ ಮಾಡಲಾಗಿದ್ದು, ಪರಿಷ್ಕೃತ ದರ ಈ ಕೆಳಗಿನಂತಿದೆ.
ಕಾರು/ವ್ಯಾನ್/ಜೀಪ್: ಏಕಮುಖ ಸಂಚಾರಕ್ಕೆ 165 ರೂಪಾಯಿ (30 ರೂ. ಹೆಚ್ಚಳ). ದ್ವಿಮುಖ ಸಂಚಾರ – 250 ರೂಪಾಯಿ (45 ರೂ. ಹೆಚ್ಚಳ).
ಲಘು ವಾಹನಗಳು/ಮಿನಿಬಸ್: 270 ರೂಪಾಯಿ (50 ರೂ. ಹೆಚ್ಚಳ) ದ್ವಿಮುಖ ಸಂಚಾರ -405 ರೂಪಾಯಿ (75 ರೂ. ಹೆಚ್ಚಳ)
ಟ್ರಕ್/ ಬಸ್/ಎರಡು ಆಕ್ಸೆಲ್ ವಾಹನ – 565 ರೂಪಾಯಿ (165 ರೂ. ಹೆಚ್ಚಳ), ದ್ವಿಮುಖ ಸಂಚಾರ – 850 ರೂಪಾಯಿ (160 ರೂ. ಹೆಚ್ಚಳ)
ತ್ರಿ ಆಕ್ಸೆಲ್ ವಾಣಿಜ್ಯ ವಾಹನಗಳು: ಏಕಮುಖ ಸಂಚಾರ 615 ರೂಪಾಯಿ (115 ರೂ. ಹೆಚ್ಚಳ), ದ್ವಿ ಮುಖಸಂಚಾರ – 925 ರೂಪಾಯಿ ( 225 ರೂ. ಹೆಚ್ಚಳ)
ಭಾರೀ ಕಟ್ಟಡ ನಿರ್ಮಾಣ ವಾಹಗನಳು/ಅರ್ಥ್ ಮೂವರ್ಸ್/4-6 ಆಕ್ಸೆಲ್ ವಾಹನಗಳು: 885 ರೂಪಾಯಿ (165 ರೂ. ಹೆಚ್ಚಳ) ದ್ವಿಮುಖ ಸಂಚಾರ – 1,330 ರೂಪಾಯಿ (250ರೂ. ಹೆಚ್ಚಳ)
7 ಅಥವಾ ಅದಕ್ಕಿಂತ ಎಕ್ಸೆಲ್ ವಾಹನಗಳು: 1,080 ರೂಪಾಯಿ (200ರೂ. ಹೆಚ್ಚಳ) ದ್ವಿಮುಖ ಸಂಚಾರ – 1,620 ರೂಪಾಯಿ( 305 ರೂ.ಹೆಚ್ಚಳ)