ಬೆಂಗಳೂರು: ಮತ್ತೊಮ್ಮೆ ಸಚಿವ ಸಂಪುಟಕ್ಕೆ ಸೇರ್ಪಡೆಗೊಂಡಿರುವುದಕ್ಕೆ ಸಂತಸವಾಗಿದೆ. ಜನಪರ ಕೆಲಸ ಮಾಡುವ ಯಾವುದೇ ಖಾತೆ ನೀಡಿದರೂ ನಿಭಾಯಿಸುತ್ತೇನೆ. ಆದರೆ ಅಬಕಾರಿ ಖಾತೆ ಮಾತ್ರ ಬೇಡ ಎಂದು ಎಂಟಿಬಿ ನಾಗರಾಜ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ನೂತನ ಸಚಿವ, ಈ ಹಿಂದೆಯೂ ನಾನು ಅಬಕಾರಿ ಖಾತೆ ಬೇಡ ಎಂದು ಹೇಳಿದ್ದೆ. ಈಗಲೂ ನನಗೆ ಅಬಕಾರಿ ಖಾತೆ ಬೇಡ ಎಂದು ಹೇಳುತ್ತೇನೆ. ಬಡಜನರ, ಕಾರ್ಮಿಕರ ಪರ ಹಾಗೂ ಜನಪರವಾದ ಕೆಲಸ ಮಾಡುವಂತಹ ಬೇರೆ ಯಾವುದೇ ಖಾತೆ ಕೊಟ್ಟರು ನಿರ್ವಹಿಸಲು ಸಿದ್ಧ ಎಂದು ಹೇಳಿದರು.
ಇಂದು ಕಿಶೋರ್ ಕುಮಾರ್ ಅವರ ಹುಟ್ಟುಹಬ್ಬ: ಗಾಯಕನ ಕೆಲ ಹಿಟ್ ಹಾಡುಗಳ ಬಗ್ಗೆ ತಿಳಿಯೋಣ
ವಾಸ್ತು ಪ್ರಕಾರವಾದ ಕೊಠಡಿ ನೀಡಬೇಕು ಎಂಬುದು ನನ್ನ ಬೇಡಿಕೆ. ಇದ್ದಿದ್ದರಲ್ಲಿ ಸ್ವಲ್ಪ ಮಟ್ಟಿಗಾದರೂ ವಾಸ್ತು ನೋಡುವುದು ಒಳ್ಳೆಯದು. ಮುಂದೆ ಯಾವುದೇ ಸಮಸ್ಯೆಯಾಗಲ್ಲ ಎಂಬುದು ನಂಬಿಕೆ ಎಂದರು.
ಇನ್ನು ಮಿತ್ರಮಂಡಳಿಯ ಆರ್.ಶಂಕರ್, ಶ್ರೀಮಂತಪಾಟೀಲ್ ಅವರಿಗೆ ಸಚಿವ ಸ್ಥಾನ ಕೈತಪ್ಪಿದೆ. ಹೆಚ್.ವಿಶ್ವನಾಥ್ ಗೂ ಸ್ಥಾನ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ಅವರನ್ನೂ ಪರಿಗಣಿಸಬೇಕು. ಪಕ್ಷದಲ್ಲಿ ಒಳ್ಳೆಯ ಸ್ಥಾನಮಾನ ನೀಡಬೇಕು ಎಂದು ನಾವೆಲ್ಲರೂ ಸಿಎಂ ಬಸವರಾಜ್ ಬೊಮ್ಮಾಯಿ ಬಳಿ ಚರ್ಚೆ ಮಾಡಬೇಕು ಎಂದುಕೊಂಡಿದ್ದೇವೆ ಎಂದು ಹೇಳಿದರು.