ಬೆಂಗಳೂರು: ಓಲಾ, ಊಬರ್ ಕ್ಯಾಬ್ ಗಳಿಗೆ ವಾರದೊಳಗೆ ರಾಜ್ಯ ಸರ್ಕಾರ ಹೊಸ ದರ ನಿಗದಿ ಮಾಡಲು ನಿರ್ಧರಿಸಿದೆ. ಈ ಮೂಲಕ ಪೀಕ್ ಟೈಂ ಸೇರಿದಂತೆ ಹಲವು ನೆಪ ಹೇಳಿ ಗ್ರಾಹಕರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದ ಚಾಲಕರಿಗೆ ಕಡಿವಾಣ ಹಾಕಲು ಮುಂದಾಗಿದೆ.
ಹೊಸ ದರ ಜಿ.ಎಸ್.ಟಿ. ಯನ್ನೂ ಒಳಗೊಂಡಿರಲಿದ್ದು, ಮಿನಿಮಮ್ ದರ 35-40 ರೂಪಾಯಿಗೆ ಏರಿಕೆಯಾಗುವ ಸಾಧ್ಯತೆ ಇದೆ. ಓಲಾ, ಊಬರ್ ಕಂಪನಿಗಳಿಗೆ ನೀಡಲಾಗಿದ್ದ 15 ದಿನಗಳ ಗಡುವು ಮುಕ್ತಾಯವಾಗಿರುವ ಹಿನ್ನೆಲೆಯಲ್ಲಿ ಸರ್ಕಾರವೇ ಹೊಸ ದರ ನಿಗದಿ ಮಾಡಲು ಮುಂದಾಗಿದೆ.
ಸಧ್ಯ ಸಾರಿಗೆ ಇಲಾಖೆ 2 ಕಿ.ಮೀ.ಗೆ 30 ರೂಪಾಯಿಯನ್ನು ನಿಗದಿಪಡಿಸಿದೆ. ಓಲಾ – ಊಬರ್ ಕಂಪನಿಗಳು ಮಿನಿಮಮ್ ದರವನ್ನು 100 ರೂಪಾಯಿ ವಸೂಲಿ ಮಾಡುತ್ತಿದ್ದವು. ಇದೀಗ ಮುಂದಿನ ವಾರದಿಂದ ಹೊಸ ದರ ಫಿಕ್ಸ್ ಮಾಡಿ ಸರ್ಕಾರವೇ ಆದೇಶ ಹೊರಡಿಸಲಿದೆ.