ಬೆಂಗಳೂರು: ನೂತನ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಅಧಿಕಾರ ವಹಿಸಿಕೊಳ್ಳುತ್ತಿರುವ ಬೆನ್ನಲ್ಲೇ ವಲಸಿಗ ಸಚಿವರಿಗೆ ಮಂತ್ರಿ ಸ್ಥಾನ ಕಳೆದುಕೊಳ್ಳುವ ಭೀತಿ ಎದುರಾಗಿದ್ದು, ಈ ನಿಟ್ಟಿನಲ್ಲಿ ನಿಯೋಜಿತ ಮುಖ್ಯಮಂತ್ರಿ ಭೇಟಿಯಾಗಿ ಚರ್ಚಿಸಿದ್ದಾರೆ.
ಮುಂಜಾನೆಯಿಂದಲೂ ಬಾಂಬೆ ಮಿತ್ರಮಂಡಳಿ ಸದಸ್ಯರು ನಿಯೋಜಿತ ಸಿಎಂ ಬಸವರಾಜ್ ಬೊಮ್ಮಾಯಿ ಹೋದಲ್ಲೆಲ್ಲ ಓಡಾಡುತ್ತಿದ್ದು, ಒಬ್ಬರ ಬಳಿಕ ಮತ್ತೊಬ್ಬರು ಭೇಟಿಯಾಗುವ ಮೂಲಕ ನೂತನ ಸಂಪುಟದಲ್ಲಿ ತಮ್ಮನ್ನು ಕೈಬಿಡದಂತೆ ಪರೋಕ್ಷ ಮನವಿ ಮಾಡುತ್ತಿದ್ದಾರೆ.
BIG BREAKING: 24 ಗಂಟೆಯಲ್ಲಿ ಗಣನೀಯವಾಗಿ ಏರಿಕೆಯಾಯ್ತು ಕೊರೊನಾ ಸೋಂಕಿತರ ಸಂಖ್ಯೆ; ಸಾವಿನ ಸಂಖ್ಯೆಯೂ ಹೆಚ್ಚಳ
ಬೆಳಿಗ್ಗೆಯೇ ಮಾಜಿ ಸಚಿವ ಭೈರತಿ ಬಸವರಾಜ್, ಗೋಪಾಲಯ್ಯ, ಬೊಮ್ಮಾಯಿ ಅವರನ್ನು ಭೇಟಿಯಾಗಿದ್ದು, ಇದೀಗ ಆರ್.ಟಿ.ನಗರದ ನಿವಾಸದಲ್ಲಿ ಕೆ.ಸುಧಾಕರ್, ಬಿ.ಸಿ.ಪಾಟೀಲ್, ಶಿವರಾಮ್ ಹೆಬ್ಬಾರ್ ಸೇರಿದಂತೆ ಹಲವರು ನಿಯೋಜಿತ ಸಿಎಂ ಭೇಟಿಯಾಗಿದ್ದಾರೆ.
ಒಟ್ಟಾರೆ ನೂತನ ಸಂಪುಟದಲ್ಲಿ ಹೊಸ ಮುಖಗಳಿಗೆ ಆದ್ಯತೆ ನೀಡುವ ಸಾಧ್ಯತೆ ದಟ್ಟವಾಗಿರುವುದರಿಂದ ಬಾಂಬೆ ಮಿತ್ರಮಂಡಳಿ ಸದಸ್ಯರಿಗೆ ತಮ್ಮನ್ನು ಸಂಪುಟದಿಂದ ಕೈಬಿಡುವ ಆತಂಕ ಎದುರಾಗಿದ್ದು, ಸಚಿವ ಸ್ಥಾನಕ್ಕಾಗಿ ಇನ್ನಿಲ್ಲದ ಕಸರತ್ತು ಆರಂಭಿಸಿದ್ದಾರೆ.