alex Certify BIG NEWS; ವರುಣಾರ್ಭಟಕ್ಕೆ ಉರುಳಿಬಿದ್ದ ಆಲದ ಮರ; ವ್ಯಕ್ತಿ ದುರ್ಮರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS; ವರುಣಾರ್ಭಟಕ್ಕೆ ಉರುಳಿಬಿದ್ದ ಆಲದ ಮರ; ವ್ಯಕ್ತಿ ದುರ್ಮರಣ

ರಾಮನಗರ: ಮಳೆಯ ಅಬ್ಬರಕ್ಕೆ ರಾಮನಗರ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿಯುಂಟಾಗಿದ್ದು, ಹೆದ್ದಾರಿಗಳು, ರೈಲ್ವೆ ನಿಲ್ದಾಣ, ಗ್ರಾಮಗಳು ಸಂಪೂರ್ಣ ಜಲಾವೃತಗೊಂಡಿವೆ. ಈ ನಡುವೆ ವ್ಯಕ್ತಿಯೋರ್ವರು ಸಾವನ್ನಪ್ಪಿರುವ ಘಟನೆ ನಡೆದಿದೆ.

ಮಳೆಯ ಆರ್ಭಟಕ್ಕೆ ಆಲದಮರ ಉರುಳಿಬಿದ್ದ ಪರಿಣಾಮ ಬೋರೇಗೌಡ ಎಂಬ ವ್ಯಕ್ತಿ ಸಾವನ್ನಪ್ಪಿರುವ ಘಟನೆ ರಾಮನಗರ ಜಿಲ್ಲೆ ಬಿಡದಿ ಬಳಿಯ ತೊರೆದೊಡ್ಡಿ ಬಳಿ ಸಂಭವಿಸಿದೆ.

ರಾಮನಗರ ಜಿಲ್ಲೆಯಲ್ಲಿ ಕಳೆದ 20 ವರ್ಷಗಳಲ್ಲೇ ಅತಿ ಹೆಚ್ಚು ಮಳೆ ಈ ಬಾರಿ ಸಂಭವಿಸಿದ್ದು, ಕೆರೆ ಕೋಡಿಗಳು ಒಡೆದು ನೀರು ಉಕ್ಕಿ ಹರಿಯುತ್ತಿವೆ. ಹೆದ್ದಾರಿಯ ರಸ್ತೆಗಳಲ್ಲೇ ವಾಹನಗಳು ಮುಳುಗಡೆಯಾಗಿದ್ದು, ಕ್ರೇನ್ ಮೂಲಕ ವಾಹನಗಳನ್ನು ಹೊರತೆಗೆಯಲಾಗುತ್ತಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...