ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗುತ್ತಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ವರುಣಾ ಕ್ಷೇತ್ರದಿಂದ ಟಿಕೆಟ್ ಘೋಷಿಸಲಾಗಿದೆ. ವರುಣಾದಿಂದ ಸ್ಪರ್ಧಿಸಿದರೆ ಗೆಲುವು ನಿಶ್ಚಿತ ಎಂಬ ಕಾರಣಕ್ಕಾಗಿ ಕಾಂಗ್ರೆಸ್ ಹೈಕಮಾಂಡ್ ಈ ತೀರ್ಮಾನ ಕೈಗೊಂಡಿದೆ ಎಂದು ಹೇಳಲಾಗಿದೆ.
ಇದರ ಮಧ್ಯೆ ಜೆಡಿಎಸ್ ಮೊದಲ ಪಟ್ಟಿಯಲ್ಲಿ ವರುಣಾ ಕ್ಷೇತ್ರದಿಂದ ಹೆಸರು ಘೋಷಣೆಯಾಗಿದ್ದ ಎಸ್.ಎಂ. ಅಭಿಷೇಕ್ ಮೊದಲಿಗೆ ಪ್ರಚಾರ ಸಿದ್ಧತಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರಾದರೂ ಸಹ ಯತೀಂದ್ರ ಸಿದ್ದರಾಮಯ್ಯ ಬದಲಿಗೆ ಸಿದ್ದರಾಮಯ್ಯನವರ ಹೆಸರು ಘೋಷಣೆಯಾಗುತ್ತಿದ್ದಂತೆ ತಟಸ್ಥರಾಗಿ ಉಳಿದಿದ್ದಾರೆ ಎಂದು ಹೇಳಲಾಗಿದೆ. ಇದು ಜೆಡಿಎಸ್ ನಾಯಕರ ಗಮನಕ್ಕೂ ಬಂದಿದೆ ಎಂದು ಮೂಲಗಳು ತಿಳಿಸಿವೆ.
ಹೀಗಾಗಿ ಎಸ್ ಎಂ ಅಭಿಷೇಕ್ ಅವರ ಜೊತೆ ಮಾತನಾಡಿ ಒಂದೆರಡು ದಿನಗಳ ಕಾಲ ಕಾದು ನೋಡಿದ ಬಳಿಕ ಅಗತ್ಯ ಬಿದ್ದಲ್ಲಿ ಅಭ್ಯರ್ಥಿ ಬದಲಿಸುವ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಹೇಳಲಾಗಿದೆ. ಕಳೆದ ಬಾರಿ ಯತೀಂದ್ರ ಸಿದ್ದರಾಮಯ್ಯ ಅವರ ವಿರುದ್ಧ ಜೆಡಿಎಸ್ ನಿಂದ ಕಣಕ್ಕಿಳಿದಿದ್ದ ಎಸ್ಎಂ ಅಭಿಷೇಕ್ 28,123 ಮತಗಳನ್ನು ಪಡೆದಿದ್ದರು.