ಸ್ವಿಗ್ಗಿ, ಆನ್‌ಲೈನ್‌ನಲ್ಲಿ ಬುಕ್ ಮಾಡಿರೋ ಊಟ-ತಿಂಡಿಯನ್ನ ಮನೆ ಮನೆಗಳಿಗೆ, ತಲುಪಿಸುವ ಒಂದು ಸಂಸ್ಥೆ. ಈ ರೀತಿಯ ಕೆಲಸ ಯುವಕರು ಅಷ್ಟೆ ಅಲ್ಲ ಯುವತಿಯರು, ಮಹಿಳೆಯರು ಸಹ ಕೆಲಸ ಮಾಡುತ್ತಿದ್ದಾರೆ. ಈಗ ಈ ಸಂಸ್ಥೆ ಮಹಿಳಾ ಡಿಲೆವರಿ ಎಕ್ಸಿಕ್ಯೂಟಿವ್‌ಗಳನ್ನು ಲೈಂಗಿಕ ಕಿರುಕುಳದಿಂದ ರಕ್ಷಿಸಲು ಹೊಸ ನಿಯಮವೊಂದನ್ನ ಜಾರಿ ಮಾಡಿದೆ. ಇದು ಮಹಿಳೆಯರ ಸುರಕ್ಷಿತ ದೃಷ್ಟಿಯಿಂದ ಜಾರಿ ಮಾಡಿರುವ ನಿಯಮವಾಗಿದೆ.
ಇದರ ಪ್ರಕಾರ, ಗ್ರಾಹಕರು ಅಥವಾ ಬೇರೆ ಯಾವ ವ್ಯಕ್ತಿಯಿಂದಾದರೂ ಕೆಲಸದ ಸ್ಥಳದಲ್ಲಿ ಅನುಚಿತವಾಗಿ ವರ್ತಿಸಿದ್ದಾದರೆ, ಅಥವಾ ಲೈಂಗಿಕ ಕಿರುಕುಳ ನೀಡಿದ್ದೇ ಆದರೆ ಆ ಮಹಿಳೆಯು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬಹುದು. ಆಗ ಕಾನೂನು ಮಹಿಳಾ ಕೆಲಸಗಾರರಿಗೆ ನೆರವು ನೀಡುವುದಲ್ಲದೇ ಗ್ರಾಹಕರ ಸಂಖ್ಯೆಯನ್ನ ಹೈಲೈಟ್ ಮಾಡುತ್ತೆ. ಹೀಗೆ ಮಾಡುವುದರಿಂದ ಅದು ಅಪರಾಧ ಎಂದು ಪರಿಗಣಿಸಲಾಗುತ್ತೆ, ಮತ್ತು ಅವರನ್ನ ಸ್ವಿಗ್ಗಿ ಪ್ಲಾಟ್‌ಫಾರ್ಮ್‌ನಿಂದ ಶಾಶ್ವತವಾಗಿ ತೆಗೆದು ಹಾಕಲಾಗುತ್ತೆ.
ಇನ್ನೂ ಮಹಿಳಾ ಉದ್ಯೋಗಿಗಳು, ಸಮಸ್ಯೆಗಳನ್ನ ಎದುರಿಸುತ್ತಿದ್ದಲ್ಲಿ ಅವರು, ಯಾವುದೇ ಸಮಯದಲ್ಲಿ, ಗ್ರಾಹಕರ ವಿರುದ್ಧ ದೂರು ದಾಖಲಿಸಬಹುದು. ಆ ಸಮಯದಲ್ಲಿ ಕಂಪನಿ ಮಹಿಳಾ ಉದ್ಯೋಗಿಗಳ ಪರ ನಿಲ್ಲುವುದಲ್ಲದೇ, ಪೊಲೀಸರಿಗೆ ಬೇಕಾದ ಸಹಾಯ ಕೂಡಾ ಮಾಡುತ್ತೆ ಎಂದು ಕಂಪನಿ ಹೇಳಿಕೊಂಡಿದೆ.
ಫುಡ್ ಡಿಲೆವರಿ ಗರ್ಲ್ಸ್ ಆಗಿ ಕೆಲಸ ಮಾಡುತ್ತಿರುವ ಯುವತಿಯರು Swiggyಯ ತುರ್ತು ಸೇವೆಗೆ ಅಂತಿರುವ SOS ಸಂಖ್ಯೆಗೆ ಕರೆ ಮಾಡಿ ಸಹಾಯ ಪಡೆಯಬಹುದು. ಈ ಸಂದರ್ಭದಲ್ಲಿ ಮಹಿಳಾ ಉದ್ಯೋಗಿಗಳು ಸ್ವಿಗ್ಗಿಯಲ್ಲಿ ಆನ್‌ಗ್ರೌಂಡ್ ಆಗಿ ಕೆಲಸ ಮಾಡುತ್ತಿರುವ ತಂಡಕ್ಕೆ ದೂರು ನೀಡಬಹುದು. ಇದು ಮಹಿಳೆಯರ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಆಂತರಿಕ ಸಮಿತಿ. ಇದು ಮುಂದೆ ಬೇಕಾದ ಎಲ್ಲ ರೀತಿಯ ತನಿಖೆಯನ್ನ ಮಾಡುತ್ತದೆ. ಅಷ್ಟೆ ಅಲ್ಲ ನೊಂದ ಮಹಿಳಾ ಉದ್ಯೋಗಿಗಳಿಗೆ ಬೇಕಾದ ಎಲ್ಲ ರೀತಿಯ ಸುರಕ್ಷತೆಯನ್ನ ನೋಡಿಕೊಳ್ಳುವ ಜವಾಬ್ದಾರಿ ಇವರ ಮೇಲಿರುತ್ತೆ.
ಸ್ವಿಗ್ಗಿ ಡೆಲಿವರಿ ಎಕ್ಸಿಕ್ಯೂಟಿವ್ ಅಪ್ಲಿಕೇಶನ್‌ನಲ್ಲಿರುವ ಈ SOS ಬಟನ್ ಸಹಾಯದಿಂದ ಯಾವುದೇ ಸಮಯದಲ್ಲಾದರೂ ಸಹಾಯವನ್ನು ಪಡೆಯಬಹುದು. ಜೊತೆಗೆ ಆಂಬ್ಯುಲೆನ್ಸ್, ಸ್ಥಳೀಯ ಪೊಲೀಸ್ ಠಾಣೆ ಇವುಗಳನ್ನ ತಕ್ಷಣವೇ ಸಂಪರ್ಕಿಸಬಹುದಾಗಿದೆ.
ಇದೆಲ್ಲದರ ಹೊರತಾಗಿ ಮಹಿಳೆಯರು ಯಾವುದಾದರೂ ಪ್ರದೇಶ ತಮಗೆ ಸುರಕ್ಷಿತ ಅಲ್ಲ ಅನ್ನೊ ಭಾವ ಇದ್ದರೆ, ಅಲ್ಲಿ ಹೋಗುವುದನ್ನ ನಿರಾಕರಿಸಬಹುದು. ಸ್ವಿಗ್ಗಿ ಕಂಪನಿ ಸ್ಪಷ್ಟವಾಗಿ ಹೇಳಿದೆ.