ಕೋಝಿಕೋಡ್: ಕಾಸರಗೋಡು ಮೂಲದ ಮಲಯಾಳಂ ನಟಿ ಶಹನಾ ಆತ್ಮಹತ್ಯೆಗೆ ಶರಣಾಗಿದ್ದಾರೆ. 20 ವರ್ಷದ ಶಹನಾ ಕಳೆದ ಒಂದುವರೆ ವರ್ಷದ ಹಿಂದಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.
ಕೇರಳದ ಕೋಝಿಕೋಡ್ ನ ನಿವಾಸದಲ್ಲಿ ಶಹನಾ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ತಮ್ಮ ಮಗಳ ಸಾವಿಗೆ ಆಕೆಯ ಪತಿಯೇ ಕಾರಣ ಎಂದು ಶಹನಾ ತಾಯಿ ದೂರು ನೀಡಿದ್ದಾರೆ.
ಮಗಳಿಗೆ ಪತಿ ಸಾಜನ್ ಹಿಂಸೆ ನೀಡುತ್ತಿದ್ದ. ಆತನೆ ಮಗಳ ಸಾವಿಗೆ ಕಾರಣ ಎಂದು ದೂರು ನೀಡಿದ್ದಾರೆ. ದಾಂಪತ್ಯ ಕಲಹದಿಂದಾಗಿ ಶಹನಾ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದ್ದು, ಶಹನಾ ಪತಿ ಸಾಜನ್ ನನ್ನು ಪೊಲೀಸರು ಬಂಧಿಸಿದ್ದಾರೆ.
ನಟಿ ಶಹನಾ ಕನ್ನಡದ ಲಾಕ್ ಡೌನ್ ಚಿತ್ರದಲ್ಲಿಯೂ ಅಭಿನಯಿಸಿದ್ದರು.