ಬೆಂಗಳೂರು: ಬಿಜೆಪಿಯದ್ದು ರೌಡಿ ರಾಜಕಾರಣ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ತಿರುಗೇಟು ನೀಡಿರುವ ಆರೋಗ್ಯ ಸಚಿವ ಡಾ.ಸುಧಾಕರ್, ರೌಡಿಸಂ ಹುಟ್ಟು ಹಾಕಿದ್ದೇ ಕಾಂಗ್ರೆಸ್ ನವರು. ಕಾಂಗ್ರೆಸ್ ಇತಿಹಾಸ ನೋಡಿದರೆ ಗೊತ್ತಾಗುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಬಿಜೆಪಿ ರೌಡಿ ರಾಜಕಾರಣ ಮಾಡುತ್ತಿದೆ ಎಂದು ಆಕ್ರೋಶ, ಆರೋಪ ಮಾಡುತ್ತಿರುವುದು ಹಾಸ್ಯಾಸ್ಪದ ಕಾಂಗ್ರೆಸ್ ನಾಯಕರ ಇತಿಹಾಸವನ್ನು ಒಮ್ಮೆ ನೋಡಿ. ರೌಡಿ ರಾಜಕಾರಣ ಯಾರದ್ದು ಎಂದು. ನಮ್ಮ ಪಕ್ಷದ ಬಗ್ಗೆ ಅವರು ಆರೋಪಿಸುವುದು ಎಂದರೆ ಭೂತದ ಬಾಯಲ್ಲಿ ಭಗವದ್ಗೀತೆಯಂತಿದೆ ಎಂದು ತಿರುಗೇಟು ನೀಡಿದ್ದಾರೆ.
ಬಿಜೆಪಿಯಲ್ಲಿ ಯಾವುದೇ ರೌಡಿಗಳನ್ನು, ರೌಡಿ ಶೀಟರ್ ಗಳನ್ನು ಸೇರಿಸಿಕೊಳ್ಳಲ್ಲ. ನಮ್ಮ ಪಕ್ಷಕ್ಕೆ ಅದರದ್ದೇ ಆದ ತತ್ವ ಸಿದ್ಧಾಂತಗಳಿವೆ. ಕ್ರಿಮಿನಲ್ ಹಿನ್ನೆಲೆಯವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಕೆಲಸ ಮಾಡುವುದಿಲ್ಲ ಎಂದರು.