ಮೈಸೂರು: ಮೈಸೂರು ಜಿಲ್ಲೆ ಮಾಜಿ ಡಿ.ಸಿ.ರೋಹಿಣಿ ಸಿಂಧೂರಿ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಶಾಸಕ ಸಾ.ರಾ.ಮಹೇಶ್, ರೋಹಿಣಿ ಬರೋಬ್ಬರಿ 6 ಕೋಟಿ ರೂಪಾಯಿ ಕಿಕ್ ಬ್ಯಾಕ್ ಪಡೆದುಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಸಾ.ರಾ.ಮಹೇಶ್, ಪ್ಲಾಸ್ಟಿಕ್ ಮುಕ್ತ ಮಾಡುವ ಯೋಜನೆಯಲ್ಲಿ ಭಾರಿ ಅಕ್ರಮ ನಡೆದಿದೆ. ರೋಹಿಣಿ ಸಿಂಧೂರಿಯವರು ಪಾಲಿಕೆ ಕೌನ್ಸಿಲ್ ಒಪ್ಪಿಗೆ ಇಲ್ಲದೇ ಬಟ್ಟೆ ಬ್ಯಾಗ್ ಖರೀದಿಸಿದ್ದು, ಅಕ್ರಮವೆಸಗಿ ಕಿಕ್ ಬ್ಯಾಕ್ ಪಡೆದಿದ್ದಾರೆ.
ಬಾಹ್ಯಾಕಾಶದಲ್ಲಿ ತಲೆಗೂದಲು ಸ್ವಚ್ಚಗೊಳಿಸುವುದು ಹೇಗೆ ಗೊತ್ತಾ…?
ಜಿ ಎಸ್ ಟಿ ಸೇರಿ 7.55 ಕೋಟಿ ಮೌಲ್ಯದ ಬಟ್ಟೆ ಬ್ಯಾಗ್ ಖರೀದಿಸಿ ಗುತ್ತಿಗೆದಾರರಿಂದ ಕೈಮಗ್ಗಕ್ಕೆ ಬ್ಯಾಗ್ ಸರಬರಾಜು ಮಾಡಲಾಗಿದೆ. ಸುಮಾರು 14,71,458 ಬಟ್ಟೆ ಬ್ಯಾಗ್ ಖರೀದಿಸಿದ್ದು, ಇದಕ್ಕೆ ವಾಸ್ತವವಾಗಿ 1 ಕೋಟಿ 47 ಲಕ್ಷದ 15 ಸಾವಿರ ರೂ. ಆದರೆ ಅವರು 7 ಕೋಟಿ ರೂಪಾಯಿ ಕೊಟ್ಟು ಖರೀದಿಸಿ ಬರಿ ಬ್ಯಾಗ್ ನಲ್ಲೇ 6 ಕೋಟಿ ರೂಪಾಯಿ ಕಿಕ್ ಬ್ಯಾಕ್ ಪಡೆದಿದ್ದಾರೆ. ಇನ್ನು ಮಹಾಮಸ್ತಕಾಭಿಷೇಕದಲ್ಲಿ ಎಷ್ಟು ಅಕ್ರಮವೆಸಗಿರಬೇಕು ಎಂದು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಸಿಎಸ್ ಗೆ ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ಮನವಿ ಮಾಡುತ್ತೇವೆ. ಒಂದುವೇಳೆ ಕ್ರಮಕ್ಕೆ ಮುಂದಾಗದಿದ್ದರೆ ಸಿಎಸ್ ಮನೆ ಮುಂದೆಯೇ ಧರಣಿ ನಡೆಸುವುದಾಗಿ ಎಚ್ಚರಿಸಿದರು.