ಬೆಂಗಳೂರು: ಐಪಿಎಸ್ ಅಧಿಕಾರಿ ಡಿ.ರೂಪಾ ಹಾಗೂ ಐ ಎ ಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಕಿತ್ತಾಟ ಪ್ರಕರಣದ ಬೆನ್ನಲ್ಲೇ ರಾಜ್ಯ ಸರ್ಕಾರ ಮೂವರು ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಈ ಬೆಳವಣಿಗೆ ಬೆನ್ನಲ್ಲೇ ಡಿ.ರೂಪಾ ಹಾಗೂ ಸಾಮಾಜಿಕ ಕಾರ್ಯಕರ್ತ ಗಂಗರಾಜು ಜೊತೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದೆ.
ಆಡಿಯೋದಲ್ಲಿಯೂ ಡಿ.ರೂಪಾ ರೋಹಿಣಿ ಸಿಂಧೂರಿ ವಿರುದ್ಧ ಮತ್ತಷ್ಟು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ರೋಹಿಣಿ ಕುಟುಂಬದವರದ್ದು ರಿಯಲ್ ಎಸ್ಟೇಟ್ ಬ್ಯುಸಿನೆಸ್, ತನ್ನ ಪತಿಯ ರಿಯಲ್ ಎಸ್ಟೇಟ್ ಪ್ರಮೋಟ್ ಮಾಡಲು ಅಧಿಕಾರವನ್ನು ಬಳಸಿಕೊಳ್ಳುತ್ತಿದ್ದಾಳೆ. ನಮ್ಮವರನ್ನು ಬಳಸಿಕೊಂಡು ಲ್ಯಾಂಡ್ ಡೀಲ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ರೋಹಿಣಿ ಕ್ಯಾನ್ಸರ್ ರೋಗ ಇದ್ದಂತೆ ಎಲ್ಲರನ್ನು ಬುಟ್ಟಿಗೆ ಹಾಕಿಕೊಳ್ತಾ ಬರ್ತಾಳೆ. ಕಳೆದ 8 ವರ್ಷಗಳಿಂದ ನಾನು ಗಮನಿಸ್ತಿದೀನಿ. ನನ್ನ ಗಂಡನ ಹಿಂದೆಯೇ ಬಿದ್ದಿದ್ದಾಳೆ. ಆಯಮ್ಮನ ದೆಸೆಯಿಂದ ನಮ್ಮ ಕುಟುಂಬವೇ ಹಾಳಾಗ್ತಿದೆ. ಮುನಿಶ್ ಮೌದ್ಗಿಲ್ ಮನೆ ಕಡೆ ಗಮನ ಕೊಡುತ್ತಿಲ್ಲ. ಮನೆಯ ಬಗ್ಗೆ ಸ್ವಲ್ಪವೂ ಲಕ್ಷ್ಯ ಇಲ್ಲ. ಡಿ.ಕೆ.ರವಿ ವಿಷಯದಲ್ಲಿ ಆಗಿದ್ದೂ ಹಾಗೆಯೇ. ನಾನೇ ಮುನೀಶ್ ಟ್ರಾನ್ಸ್ ಫರ್ ಗೆ ರಿಕ್ವೆಸ್ಟ್ ಮಾಡಿದ್ದೇನೆ ಎಂದು ಹೇಳಿದ್ದಾರೆ.
ಇದೀಗ ಡಿ.ರೂಪಾ ಹಾಗೂ ಸಾಮಾಜಿಕ ಕಾರ್ಯಕರ್ತ ಗಂಗರಾಜು ನಡುವಿನ ಆಡಿಯೋ ಸಂಭಾಷಣೆ ಭಾರಿ ವೈರಲ್ ಆಗಿದ್ದು, ಇಬ್ಬರು ಅಧಿಕಾರಿಗಳ ಸಮರ ಇನ್ಯಾವ ಹಂತಕ್ಕೆ ಹೋಗಲಿದೆ ಕಾದು ನೋಡಬೇಕಿದೆ.