ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಸ್ವಕ್ಷೇತ್ರ ವರುಣಾಗೆ ಭೇಟಿ ನೀಡಿದ್ದು, ಭರ್ಜರಿ ರೋಡ್ ಶೋ ಮೂಲಕ ಎಂಟ್ರಿ ಕೊಟ್ಟಿದ್ದಾರೆ.
ಮೈಸೂರಿನ ಸುತ್ತೂರು ಹೆಲಿಪ್ಯಾಡ್ ಗೆ ಬಂದಿಳಿದ ಸಿಎಂ ಸಿದ್ದರಾಮಯ್ಯ ಅವರನ್ನು ಸಚಿವ ಹೆಚ್.ಸಿ. ಮಹದೇವಪ್ಪ, ಪುತ್ರ ಯತೀಂದ್ರ ಸಿದ್ದರಾಮಯ್ಯ ಆತ್ಮೀಯವಾಗಿ ಸ್ವಾಗತಿಸಿದರು. ಬಳಿಕ ಸುತ್ತೂರು ಹೆಲಿಪ್ಯಾಡ್ ನಿಂದ ಬಿಳಿಗೆರೆವರೆಗೆ ರೋಡ್ ಶೋ ಮೂಲಕ ಕೃತಾಜ್ಞತಾ ಸಮಾವೇಶದ ಸ್ಥಳಕ್ಕೆ ತೆರಳಿದರು.
ವರುಣಾದಲ್ಲಿ ಕೃತಾಜ್ಞಾತಾ ಸಮಾವೇಶದಲ್ಲಿ ಸಿದ್ದರಾಮಯ್ಯ ಭಾಗವಹಿಸಿದ್ದು, ಕ್ಷೇತ್ರದ ಜನರು ಬಂಪರ್ ಕೊಡುಗೆ ನಿರೀಕ್ಷೆಯಲ್ಲಿದ್ದಾರೆ.