ರೈತರ ಆತ್ಮಹತ್ಯೆ ಕುರಿತಂತೆ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಬಿಡುಗಡೆ ಮಾಡಿರುವ ವರದಿಯಲ್ಲಿ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ. 2021 ರಲ್ಲಿ ಒಟ್ಟು 10,881 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಪಟ್ಟಿಯಲ್ಲಿ ಮಹಾರಾಷ್ಟ್ರ ಪ್ರಥಮ ಸ್ಥಾನದಲ್ಲಿದ್ದರೆ, ಕರ್ನಾಟಕ ಎರಡನೇ ಸ್ಥಾನದಲ್ಲಿದೆ.
ಸಾವನ್ನಪ್ಪಿದವರ ಪೈಕಿ 5,318 ಮಂದಿ ಕೃಷಿಕರಾಗಿದ್ದಾರೆ 5,563 ಮಂದಿ ಕೃಷಿ ಕಾರ್ಮಿಕರಾಗಿದ್ದಾರೆ. 211 ಮಂದಿ ರೈತ ಮಹಿಳೆಯರು ಕೂಡ ಆತ್ಮಹತ್ಯೆಯಿಂದ ಸಾವಿಗೀಡಾಗಿದ್ದಾರೆ. ರೈತರ ಆತ್ಮಹತ್ಯೆ ಪ್ರಕರಣದಲ್ಲಿ ಮೂರನೇ ಸ್ಥಾನದಲ್ಲಿ ಆಂಧ್ರಪ್ರದೇಶ, ನಾಲ್ಕನೇ ಸ್ಥಾನದಲ್ಲಿ ಮಧ್ಯಪ್ರದೇಶ ಹಾಗೂ ಐದನೇ ಸ್ಥಾನದಲ್ಲಿ ತಮಿಳುನಾಡು ರಾಜ್ಯಗಳಿವೆ.
ಮಹತ್ವದ ಸಂಗತಿ ಎಂದರೆ ಪಶ್ಚಿಮ ಬಂಗಾಳ, ಬಿಹಾರ, ಝಾರ್ಖಂಡ್, ಒಡಿಸ್ಸಾ, ತ್ರಿಪುರ, ಮಣಿಪುರ ಅರುಣಾಚಲ ಪ್ರದೇಶ, ಉತ್ತರಾಖಾಂಡ, ಚಂಡಿಗಡ, ಲಕ್ಷ ದ್ವೀಪ ಹಾಗೂ ಪುದುಚೇರಿಯಲ್ಲಿ ರೈತರು ಮತ್ತು ರೈತ ಕಾರ್ಮಿಕರು ಆತ್ಮಹತ್ಯೆ ಮಾಡಿಕೊಂಡಿರುವ ಯಾವುದೇ ಪ್ರಕರಣಗಳು ನಡೆದಿಲ್ಲ.