ಬೆಂಗಳೂರು: ರಾಜ್ಯ ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್ ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದೆ. ಬೆಳೆಗಳ ಬೆಲೆ ಕುಸಿತವಾದರೆ, ಪರಿಹಾರ ಒದಗಿಸಲು “ರೈತಬಂಧು ಆವರ್ತ ನಿಧಿ” ಸ್ಥಾಪಿಸಿ ಸುಮಾರು 5,000 ಕೋಟಿ ಕೊಡ್ತೇವೆ ಎಂದು ಬಿಜೆಪಿ ನಾಯಕರು ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದರು. 5 ಸಾವಿರ ಕೋಟಿಯಲ್ಲ ಕೇವಲ 5 ಕೋಟಿಯೂ ಕೊಡಲಿಲ್ಲ ಯಾಕೆ ಎಂದು ಪ್ರಶ್ನಿಸಿದೆ.
ರಾಜ್ಯ ಹಾಗೂ ಕೇಂದ್ರ ಎರಡೂ ಕಡೆ ಬಿಜೆಪಿ ಡಬಲ್ ಇಂಜಿನ್ ಸರ್ಕಾರಗಳಿದ್ದರೂ ವಚನ ವಂಚನೆ ಮಾಡಿದ್ದೇಕೆ ಸಿಎಂ ಬೊಮ್ಮಾಯಿಯವರೇ ಎಂದು ಸರಣಿ ಟ್ವೀಟ್ ಮೂಲಕ ಕೇಳಿದೆ.
ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕಕ್ಕೆ 2ನೇ ಸ್ಥಾನ, ಇದು ಬೊಮ್ಮಾಯಿ ಮಾಡೆಲ್ ಸಾಧನೆ! ಅತಿವೃಷ್ಟಿ, ಕೋವಿಡ್‌ನಂತಹ ಕ್ಲಿಷ್ಟ ಸಂದರ್ಭದಲ್ಲಿ ರೈತರನ್ನು ಕಡೆಗಣಿಸಿದ ಪರಿಣಾಮವಿದು. ಬೆಲೆ ಏರಿಕೆಯ ಹೊರೆ ಹೊರಿಸಿದ ಡಬಲ್ ಇಂಜಿನ್ ಸರ್ಕಾರಗಳೇ ಈ ಸಾವುಗಳಿಗೆ ಹೊಣೆ. ರೈತರಿಗೆ ಕಾಂಗ್ರೆಸ್ ಕೃಷಿ ಭಾಗ್ಯ ಕೊಟ್ಟರೆ, ಬಿಜೆಪಿ ಸಾವಿನ ಭಾಗ್ಯ ಕೊಟ್ಟಿದೆ ಎಂದು ವಾಗ್ದಾಳಿ ನಡೆಸಿದೆ.