ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ ಸತತ 11ನೇ ಬಾರಿಗೆ ರೆಪೊ ದರವನ್ನು ಯಥಾಸ್ಥಿತಿ ಉಳಿಸಿಕೊಂಡಿರುವುದಾಗಿ ಆರ್ ಬಿ ಐ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.
ಆರ್ ಬಿ ಐ ಮಾನಿಟರಿ ಪಾಲಿಸಿ ಕಮಿಟಿ ಸಭೆ ಬಳಿಕ ಮಾತನಾಡಿದ ಅವರು, ರೆಪೊ ದರ ಯಥಾಸ್ಥಿತಿಯಲ್ಲಿದ್ದು, ಗೃಹಸಾಲ, ವೈಯಕ್ತಿಕ ಸಾಲ ಇಎಂಐನಲ್ಲಿ ಕೂಡ ಯಾವುದೇ ವ್ಯತ್ಯಾಸವಾಗುವುದಿಲ್ಲ ಎಂದು ಹೇಳಿದರು.
ಪ್ರಸ್ತುತ ರೆಪೊ ದರ ಶೇ.4ರಷ್ಟಿದೆ. ಇದೇ ಮುಂದುವರೆಯಲಿದ್ದು, ರಿಸರ್ವ್ ರೆಪೊ ದರ ಕೂಡ ಬದಲಾವಣೆಯಾಗಿಲ್ಲ. ಮಾರ್ಜಿನಲ್ ಸ್ಟ್ಯಾಂಡಿಂಗ್ ಫೆಸಿಲಿಟಿ ಹಾಗೂ ಬ್ಯಾಂಕ್ ರೇಟ್ ಗಳನ್ನೂ ಎಂಪಿಸಿ ಬದಲಿಸಿಲ್ಲ ಎಂದು ವಿವರಿಸಿದರು.
ಇದೇ ವೇಳೆ ದೇಶದ ಎಲ್ಲಾ ಎಟಿಎಂ ಗಳಲ್ಲಿ ಕಾರ್ಡ್ ಲೆಸ್ ಕ್ಯಾಶ್ ಸೌಲಭ್ಯ ಕಲ್ಪಿಸಲು ಆರ್ ಬಿ ಐ ಈ ಬಾರಿ ಪ್ರಸ್ತಾಪಿಸಿದೆ. ಯೂನಿಫೈಡ್ ಪೇಮೆಂಟ್ಸ್ ಇಂಟರ್ ಫೇಸ್ ಮೂಲಕ ಈ ಸೌಲಭ್ಯ ಕಲ್ಪಿಸಬಹುದಾಗಿದೆ. ಪ್ರಸ್ತುತ ಈ ಸೌಲಭ್ಯ ಕೆಲ ಬ್ಯಾಂಕ್ ಗಳಿಗೆ ಮಾತ್ರ ಇದ್ದು, ಇದನ್ನು ಎಲ್ಲಾ ಬ್ಯಾಂಕ್, ಎಟಿಎಂ ಗಳಿಗೂ ವಿಸ್ತರಿಸುವುದಾಗಿ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.