ದೈನಂದಿನ ಬಳಕೆಯ ವಸ್ತುಗಳ ಬೆಲೆ ಈಗಾಗಲೇ ಮುಗಿಲು ಮುಟ್ಟಿದ್ದು, ಇದೀಗ ಮತ್ತೊಂದು ಶಾಕಿಂಗ್ ಸಂಗತಿ ಎದುರಾಗಿದೆ. ಅಮೆರಿಕ ಡಾಲರ್ ಎದುರು ರೂಪಾಯಿ ಮೌಲ್ಯ ಇದುವರೆಗಿನ ಕನಿಷ್ಠ ಮಟ್ಟವಾದ 81.09 ರೂಪಾಯಿಗಳಿಗೆ ಇಳಿಕೆಯಾಗಿದ್ದು, ಇದರ ಪರಿಣಾಮ ದಿನ ಬಳಕೆ ವಸ್ತುಗಳು ಮತ್ತಷ್ಟು ದುಬಾರಿಯಾಗಲಿವೆ.
ಕಚ್ಚಾ ತೈಲ ಮತ್ತು ಇತರ ಸರಕುಗಳ ಬೆಲೆ ಮತ್ತಷ್ಟು ಏರಿಕೆಯಾಗಲಿದ್ದು, ಅಮದು ಮಾಡಿಕೊಳ್ಳುವ ಅಡುಗೆ ಎಣ್ಣೆಯ ಬೆಲೆ ಇನ್ನೂ ದುಬಾರಿಯಾಗಲಿದೆ ಎಂದು ಹೇಳಲಾಗಿದೆ. ಒಂದು ವೇಳೆ ಈ ಬೆಲೆ ಏರಿಕೆ ಆದರೆ ಹೋಟೆಲ್ ಆಹಾರದ ದರ ಸಹ ಹೆಚ್ಚಾಗಲಿದೆ.
ಇದರ ಮಧ್ಯೆ ಈ ವಾರದಂದು ಭಾರತೀಯ ರಿಸರ್ವ್ ಬ್ಯಾಂಕ್ ಹಣಕಾಸು ನೀತಿ ಸಮಿತಿಯು ಸಭೆ ಸೇರಲಿದ್ದು, ಹಣದುಬ್ಬರ ತಡೆಗಟ್ಟುವ ಉದ್ದೇಶದಿಂದ ರೆಪೋ ದರವನ್ನು 0.50 ರಷ್ಟು ಹೆಚ್ಚಿಸುವ ಸಾಧ್ಯತೆಯಿದ್ದು, ಇದರಿಂದ ಸಾಲಗಳ ಮೇಲಿನ ಬಡ್ಡಿದರ ಮತ್ತಷ್ಟು ಹೆಚ್ಚಲಿದೆ.