ಬೆಂಗಳೂರು: ಕೆಮಿಕಲ್ ಬಾಯ್ಲರ್ ಸ್ಫೋಟಗೊಂಡು ರಾಸಾಯನಿಕ ಸೋರಿಕೆಯಾದ ಪರಿಣಾಮ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಕರ್ನಾಟಕ-ತಮಿಳುನಾಡು ಗಡಿಭಾಗದ ಹೊಸೂರಿನಲ್ಲಿ ನಡೆದಿದೆ.
ಶಾಲೆಯ ಹಿಂಭಾಗದಲ್ಲಿದ್ದ ಖಾಸಗಿ ಕಟ್ಟಡದಲ್ಲಿ ಕೆಮಿಕಲ್ ಬಾಯ್ಲರ್ ಸ್ಫೋಟಗೊಂಡಿದೆ. ರಾಸಾಯನಿಕ ಸೋರಿಕೆಯಿಂದಾಗಿ ಶಾಲಾ ಮಕ್ಕಳಲ್ಲಿ ಉಸಿರಾಟ ಸಮಸ್ಯೆಯುಂಟಾಗಿದ್ದು, ಮಕ್ಕಳು ಪ್ರಾಣವಾಯುವಿಗಾಗಿ ನರಳಾಡುತ್ತಿದ್ದಾರೆ.
100ಕ್ಕೂ ಹೆಚ್ಚು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲವು ಮಕ್ಕಳ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.